Advertisement

ಗೆಳೆಯರ ಜೊತೆ ಅಬ್ಬಿಫಾಲ್ಸ್ ನಲ್ಲಿ ಈಜಲು ಹೋದ ತೀರ್ಥಹಳ್ಳಿ ಯುವಕ ದುರ್ಮರಣ

05:38 PM Jan 04, 2023 | Team Udayavani |

ತೀರ್ಥಹಳ್ಳಿ : ಸಮೀಪದ ಯಡೂರು ಗ್ರಾಮದ ಅಬ್ಬಿಫಾಲ್ಸ್ ನಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

Advertisement

ತೀರ್ಥಹಳ್ಳಿ ಪಟ್ಟಣದ ಶಬರಿ ಹೋಟೆಲ್ ಮಾಲೀಕರ ಮಗ ರಿಷಬ್ (20) ಮೃತಪಟ್ಟ ಯುವಕನೆಂದು ತಿಳಿದುಬಂದಿದೆ.

ಈತ ಯಡೇಹಳ್ಳಿ ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮೊ ಓದುತ್ತಿದ್ದ ರಿಷಬ್ ಬುಧವಾರ ಬೆಳಿಗ್ಗೆ ಪರೀಕ್ಷೆ ಮುಗಿಸಿಕೊಂಡು ತನ್ನ ಇಬ್ಬರು ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್ ಗೆ ಈಜಲು ತೆರಳಿದ್ದಾನೆ. ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಮೃತದೇಹವನ್ನು ಶೋಧ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಂಡಮಾನ್ – ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಅಂಕೋಲಾ ಮೂಲದ ನೌಕಾಪಡೆ ಯೋಧ ಹುತಾತ್ಮ

Advertisement
Advertisement

Udayavani is now on Telegram. Click here to join our channel and stay updated with the latest news.

Next