Advertisement
ಯುಡಿಎಫ್ ಸರಕಾರದ ಕಾಲಘಟ್ಟದಲ್ಲಿ ನಡೆದ “ಎಮರ್ಜಿಂಗ್ ಕೇರಳ’ ಯೋಜನೆಯಲ್ಲಿ ಜಲ ವಿಮಾನದ ಬಗ್ಗೆ ಪ್ರಚಾರ ಮಾಡಿತ್ತು. ಪ್ರವಾಸೋದ್ಯಮ ಇಲಾಖೆಯ ಕೈಕೆಳಗಿರುವ ಕೇರಳ ಟೂರಿಸಂ ಇನಾ#†ಸ್ಟ್ರಕ್ಚರ್ ಲಿಮಿಟೆಡ್(ಕೆಟಿಐಎಲ್) ಯೋಜನೆಯನ್ನು ಸಾಕಾರಗೊಳಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿತ್ತು. ಕೇರಳ ಏವಿಯೇಶನ್ ಕಂಪೆನಿ, ಕೈರಳಿ ಏರ್‌ಲೈನ್ಸ್, ಸೀ ಬರ್ಡ್ ಸೀ ಪ್ಲೇನ್ ಸರ್ವೀಸ್ ಮೊದಲಾದ ಕಂಪೆನಿಗಳು ಹಲವು ಬಾರಿ ಯೋಜನೆಯ ಸಾಕಾರಕ್ಕೆ ಮುಂದೆ ಬಂದರೂ ವಿರೋಧದ ಹಿನ್ನೆಲೆಯಲ್ಲಿ ಹಿಂದೆ ಸರಿದವು.
Related Articles
ಸ್ಪೀಡ್ ಬೋಟ್‌ಗಳನ್ನು ಕೆ.ಟಿ.ಡಿ.ಸಿ.ಗೂ, ಟಿ.ಡಿ.ಪಿ.ಸಿ.ಗೂ ನೀಡಿದೆ. ಬ್ಯಾಗೇಜ್ ಸ್ಕ್ಯಾನರ್, ಎಕ್ಸ್‌ರೇ ಯಂತ್ರ, ಸಿ.ಸಿ.ಟಿ.ವಿ.ಗಳು, ಫ್ಲೋಟಿಂಗ್ ಜಟ್ಟಿಗಳನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗುವುದು. ಹಿಂದಿನ ಸರಕಾರ ಯಾವುದೇ ಅಧ್ಯಯನ ನಡೆಸದೆ ಈ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿತ್ತು ಎಂದು ಪ್ರವಾಸೋದ್ಯಮ ಇಲಾಖೆಯ ಅಂಬೋಣ. ಈ ವರೆಗೆ ಯೋಜನೆಗಾಗಿ ಮಾಡಿರುವ ವೆಚ್ಚದ ಬಗ್ಗೆ ಸಮಗ್ರ ಅಂಕಿಅಂಶಗಳನ್ನು ಮತ್ತು ಲೆಕ್ಕಾಚಾರ ಮಾಡಲು ಪ್ರವಾಸೋದ್ಯಮ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ನಿರ್ದೇಶ ನೀಡಿದ್ದಾರೆ. ತಿರುವನಂತಪುರ ಮತ್ತು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಮಾಡಿಕೊಂಡ ಒಡಂಬಡಿಕೆಯನ್ನು ಸರಕಾರ ರದ್ದುಗೊಳಿಸಿದೆ.
Advertisement
ಲ್ಯಾಂಡ್ ಆಗದ ಜಲವಿಮಾನ2013ರ ಜೂನ್ ತಿಂಗಳಲ್ಲಿ ಖಾಸಗಿ ಏಜೆನ್ಸಿಯ ನೆರವಿನೊಂದಿಗೆ ಕೊಲ್ಲಂ ಅಷ್ಟಮುಡಿ ಹಿನ್ನೀರಿನಲ್ಲಿ ಜಲ ವಿಮಾನ ಯೋಜನೆಯನ್ನು ಔದ್ಯೋಗಿಕವಾಗಿ ಆರಂಭಿಸಿದ್ದರೂ ರಾಜಕೀಯ ಪಕ್ಷವೊಂದರ ನೇತೃತ್ವದಲ್ಲಿ ಮೀನು ಕಾರ್ಮಿಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತೆ ಜಲ ವಿಮಾನ ನೀರಿಗಿಳಿಯಲಿಲ್ಲ. ಪುನ್ನಮಡ ಹಿನ್ನೀರಿನಲ್ಲಿ ಜಲ ವಿಮಾನ ಲ್ಯಾಂಡ್ ಮಾಡಲು ಉದ್ದೇಶಿಸಲಾಗಿದ್ದರೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಯೋಜನೆಗೆ ಆರಂಭದಲ್ಲೇ ಸಂಕಷ್ಟ ಎದುರಾಯಿತು. ಜಲ ವಿಮಾನ ಲ್ಯಾಂಡ್ ಆಗುವುದರಿಂದ ಮೀನಿನ ಸಂಪತ್ತು ನಾಶವಾಗಬಹುದೆಂಬ ಆತಂಕದಿಂದ ಮೀನು ಕಾರ್ಮಿಕರು ಯೋಜನೆಯನ್ನು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಲು ಸರಕಾರ ತಜ್ಞರ ಸಮಿತಿಯೊಂದನ್ನು ನೇಮಿಸಿತು. ತಜ್ಞರ ಸಮಿತಿ ಮೀನು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರಕ್ಕೆ ವರದಿಯನ್ನು ಸಮರ್ಪಿಸಿತು. ಈ ಹಿನ್ನೆಲೆಯಲ್ಲಿ ಪುನ್ನಮಡ ಹಿನ್ನೀರಿನಲ್ಲಿ ಆಳವಡಿಸಲಾಗಿದ್ದ ವಾಟರ್ ಡ್ರಂ ಅನ್ನು ಮೀನುಗಾರಿಕೆ ನಡೆಸದ ವಟ್ಟಗ ಹಿನ್ನೀರಿಗೆ ಸ್ಥಳಾಂತರಿಸಲಾಯಿತು. ಈ ಮೂಲಕ ಜಲ ವಿಮಾನ ಯೋಜನೆಗೆ ಮರು ಜೀವ ನೀಡುವ ಸಂಕಲ್ಪ ಕಂಡುಬಂದರೂ ಇಂದಿನ ವರೆಗೂ ಜಲ ವಿಮಾನ ಹಿನ್ನೀರಿನಲ್ಲಿ ಲ್ಯಾಂಡ್ ಆಗಿಲ್ಲ.