Advertisement

ಹೊಸ ಸ್ಮಾರ್ಟ್‌ಫೋನ್‌ನಲ್ಲಿ ‘ಆರೋಗ್ಯ ಸೇತು’ಕಡ್ಡಾಯ

12:07 AM May 02, 2020 | Hari Prasad |

ಹೊಸದಿಲ್ಲಿ: ಇನ್ನು ಮುಂದೆ ಹೊಸ ಸ್ಮಾರ್ಟ್‌ ಮೊಬೈಲ್‌ ಫೋನ್‌ನಲ್ಲಿ ಆರೋಗ್ಯ ಸೇತು ಆ್ಯಪ್‌ ಅಳವಡಿಕೆ ಹಾಗೂ ನೋಂದಣಿಯನ್ನು ಕೇಂದ್ರ ಸರಕಾರ ಕಡ್ಡಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಲಾಕ್‌ಡೌನ್‌ ಬಳಿಕ ಭಾರತದಲ್ಲಿ ಹೊಸದಾಗಿ ಮಾರಾಟ ಮಾಡುವ ಸ್ಮಾರ್ಟ್‌ಫೋನ್‌ನಲ್ಲಿ ಈ ಆ್ಯಪನ್ನು ಕಡ್ಡಾಯವಾಗಿ ಅಳವಡಿಸುವುದರ ಜತೆಗೆ ವೈಯಕ್ತಿಕ ನೋಂದಣಿಯನ್ನೂ ಕೂಡ ಮಾಡಬೇಕಾಗಿದೆ.

ಇದಕ್ಕಾಗಿ ಮೊಬೈಲ್‌ ಕಂಪೆನಿಗಳ ಜೊತೆ ಸಂಪರ್ಕ ಹೊಂದಲು ಸರಕಾರ ನೋಡೆಲ್‌ ಏಜೆನ್ಸಿಯನ್ನು ಸ್ಥಾಪಿಸಲಿದೆ. ಈ ಬಗ್ಗೆ ಸರಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next