ಮುಂಬಯಿ: ಆರೆ ಕಾಲನಿಯಲ್ಲಿ ಮೆಟ್ರೋ ಕಾರ್ ಶೆಡ್ ಅನ್ನು ಅನುಮತಿಸುವ ಮಹಾರಾಷ್ಟ್ರ ಸರಕಾರದ ನಿರ್ಧಾರವನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ವರದಿಯಾಗಿದೆ.
ಮೆಟ್ರೋ ಕಾರ್ ಶೆಡ್ ಯೋಜನೆಗಾಗಿ ಆರೇ ಅರಣ್ಯದಲ್ಲಿ 84 ಮರಗಳನ್ನು ಕಡಿಯಲು ಟ್ರೀ ಅಥಾರಿಟಿಯ ಮುಂದೆ ತನ್ನ ಅರ್ಜಿಯನ್ನು ಮುಂದುವರಿಸಲು ಮುಂಬಯಿ ಮೆಟ್ರೋ ರೈಲು ಕಾರ್ಪೊರೇಶನ್ (ಎಂಎಂಆರ್‌ಸಿಎಲ್) ಗೆ ಇದು ಅವಕಾಶ ಮಾಡಿಕೊಟ್ಟಿತು.
ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳ ನಂತರ ನಡೆದ ತಮ್ಮ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಉಪ ದೇವೇಂದ್ರ ಫಡ್ನವೀಸ್ ಅವರು ಆರೇ ಕಾಲೋನಿಯಿಂದ ಉದ್ದೇಶಿತ ಕಾರ್ ಶೆಡ್ ಯೋಜನೆಯನ್ನು ಸ್ಥಳಾಂತರಿಸುವ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರಕಾರದ ನಿರ್ಧಾರವನ್ನು ರದ್ದುಗೊಳಿಸುವ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಠಾಕ್ರೆ, 2019 ರ ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾದ ತತ್‌ಕ್ಷಣ ಉದ್ದೇಶಿತ ಯೋಜನೆಯ ನಿರ್ಮಾಣಕ್ಕೆ ತಡೆ ಘೋಷಿಸಿ, ಅದನ್ನು ಕಾಂಜೂರ್ ಮಾರ್ಗಕ್ಕೆ ವರ್ಗಾಯಿಸಲು ಆದೇಶಿಸಿದರು.