Advertisement

ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪ್ ಗೆ ಅಧಿಕಾರ: ಭಾಸ್ಕರ ರಾವ್

12:43 PM Jul 21, 2022 | Team Udayavani |

ಹುಬ್ಬಳ್ಳಿ: ಹೊಂದಾಣಿಕೆ ರಾಜಕೀಯಕ್ಕೆ ಅವಕಾಶ ನೀಡದೆ, ವಿಷಯಾಧಾರಿತ ಚುನಾವಣೆಗೆ ಹೋಗುತ್ತೇವೆ. ಪಂಜಾಬ್ ಮಾದರಿಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಕಿತ್ತಾಟ, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಇರುವ ಪ್ರಮುಖ ಮೂರು ಪಕ್ಷಗಳು ಪರಸ್ಪರ ಆರೋಪ, ಹಗರಣಗಳ ಪ್ರಸ್ತಾಪಗಳ ಮೂಲಕ ಜನರ ಸಮಸ್ಯೆ, ನೈಜ ವಿಷಯಗಳನ್ನು ಮರೆಮಾಚಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಲೇ ಕಿತ್ತಾಟ ಶುರುವಾಗಿದೆ. ಮತದಾರರ ತೀರ್ಪು ಮೊದಲೇ ಸಿಎಂ ನಾನೇ ಎಂಬುದು ಜನತೆಗೆ ಮಾಡುವ ಅವಮಾನವಾಗಿದೆ ಎಂದರು.

ಆಪ್ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಹತ್ತು ವಿಭಾಗಳನ್ನು ಮಾಡಿದ್ದು, ತರಬೇತಿ, ಜವಾಬ್ದಾರಿ, ಅವಕಾಶ ನೀಡಿಕೆ ಕಾರ್ಯ ಮಾಡುತ್ತಿದೆ. ಗ್ರಾಮೀಣದಲ್ಲೂ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇವೆ.

ನಾವು ಅಧಿಕಾರಕ್ಕೆ ಬಂದರ ಏನು ಮಾಡುತ್ತೇವೆ ಎಂಬುದನ್ನು ಮನವರಿಕೆ ಮಾಡುತ್ತೇವೆ. ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆ-ಆಸ್ಪತ್ರೆಗಳನ್ನು ವಿಶ್ವದರ್ಜೆ ಮಾದಿಯಾಗಿ ಮಾಡುತ್ತೇವೆ ಎಂದರು.

ಉತ್ತರ ಕರ್ನಾಟಕದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಇಲ್ಲಿವರೆಗೆ ಅಧಿಕಾರ ನಡೆಸಿದವರು, ಅಧಿಕಾರದಲ್ಲಿದ್ದವರಿಗೆ ಸ್ಪಷ್ಟ ಚಿಂತನೆ, ನೀಲನಕ್ಷೆ ಇಲ್ಲವಾಗಿದೆ ಎಂದರು.

Advertisement

ಕೇಂದ್ರ ಸರಕಾರ 25 ಕೆ.ಜಿ ಒಳಗಿನ ಆಹಾರ ಧಾನ್ಯಗಳ ಖರೀದಿಗೆ ಜಿಎಸ್ ಟಿ ವಿಧಿಸುತ್ತಿದೆ. ಅಲ್ಲಿಗೆ ತಾನು ಶ್ರೀಮಂತರ ಪರ ಸರಕಾರ ಎಂಬುದನ್ನು ಸಾಬೀತು ಪಡಿಸಿದೆ ಎಂದರು.

ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ: E.D ಅಧಿಕಾರಿಗಳಿಂದ ಸೋನಿಯಾ ವಿಚಾರಣೆ, ಕಾಂಗ್ರೆಸ್ ಪ್ರತಿಭಟನೆ

ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ದುರಹಾಂಕಾರ ಆಡಳಿತದ ಪ್ರತೀಕವಾಗಿದೆ ಎಂದು ಟೀಕಿಸಿದರು.

ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಒಂದೋ ಠೇವಣಿ ಕಳೆದುಕೊಂಡು ಬಿಡುತ್ತದೆ ಇಲ್ಲವೆ ಎದುರಾಳಿಗಳ ಠೇವಣಿಯನ್ನು ಹಿಡಿಯಾಗಿ ಕಳೆದು ಬಿಡುತ್ತದೆ. ಕಿಚಡಿ ಸರಕಾರಕ್ಕೆ ಅವಕಾಶ ನೀಡದು. ದೆಹಲಿ,ಪಂಜಾಬ್ ನಲ್ಲಿ ಇದೆ ಆಗಿದೆ ಎಂದರು.

ಕೇಂದ್ರ ಸರಕಾರದ ಅಗ್ನಿಪಥ ಯೋಜನೆಯನ್ನು ವೈಯಕ್ತಿಕವಾಗಿ ಬೆಂಬಲಿಸುತ್ತೇನೆ. ಆದರೆ ಅದರ ಅನುಷ್ಠಾನ, ನಾನೇ ಮಾಡಿದೆ ಎಂಬ ಧೋರಣೆ, ಯುವಕರನ್ನು ದಾರಿ ತಪ್ಪಿಸುವ ಯತ್ನವನ್ನು ವಿರೋಧಿಸುತ್ತೇನೆ.

ಬೇರೆ ದೇಶಗಳಲ್ಲಿ ಇಂತಹ ಯೋಜನೆಗಳಿವೆ. ಅಗ್ನಪಥ ಯೋಜನೆ ಇಂಟ್ರನ್ ಶಿಪ್ ಎಂದು ಹೇಳಿ ಯುವಕರ ನೇಮಕಕ್ಕೆ ಮುಂದಾಗಬೇಕಿತ್ತು. ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಬಿಂಬಿಸಲು ಹೋಗಿ ತಪ್ಪು ಮಾಡಿದರು ಎಂದರು.

ಪಕ್ಷ ಸೂಚಿಸಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next