ನವದೆಹಲಿ : ಲೋಧಿ ರಸ್ತೆಯಲ್ಲಿರುವ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರ ನಿವಾಸದ ಹೊರಗೆ ಆಮ್ ಆದ್ಮಿ ಪಕ್ಷದ ಶಾಸಕರು, ಕೊಳೆಗೇರಿ ನಿವಾಸಿಗಳೊಂದಿಗೆ ಶನಿವಾರ ಧರಣಿ ನಡೆಸಿದರು.
ಪ್ರತಿಭಟನಾಕಾರರಲ್ಲಿ ಎಎಪಿ ಶಾಸಕರಾದ ಅತಿಶಿ, ಮದನ್ ಲಾಲ್, ಕತಾರ್ ಸಿಂಗ್ ತನ್ವರ್ ಮತ್ತು ಸಾಹಿರಾಮ್ ಪಹಲ್ವಾನ್ ಅವರು ದಕ್ಷಿಣ ದೆಹಲಿ ನೆರೆಹೊರೆಗಳಾದ ತುಘಲಕಾಬಾದ್‌ನಲ್ಲಿನ ಕೊಳೆಗೇರಿಗಳನ್ನು ಧ್ವಂಸಗೊಳಿಸುವುದನ್ನು ವಿರೋಧಿಸಿದರು.
ಸ್ಲಂ ನಿವಾಸಿಗಳು ಬಿಜೆಪಿ ಸಂಸದರ ನಿವಾಸದ ಮುಂದೆ “ನಾಚಿಕೆಯಾಗಬೇಕು ಬಿಜೆಪಿ, ಕೊಳೆಗೇರಿಗಳನ್ನು ಕೆಡವುದನ್ನು ನಿಲ್ಲಿಸಿ” ಎಂಬ ಫಲಕಗಳನ್ನು ಹಿಡಿದು ಧರಣಿ ನಡೆಸಿದರು.
ಎಂಸಿಡಿ ಚುನಾವಣೆಯ ಸಂದರ್ಭದಲ್ಲಿ ಕೇಸರಿ ಪಕ್ಷವು ಅವರಿಗೆ ಉಚಿತ ಫ್ಲಾಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದರೂ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅವರ ಮನೆಗಳನ್ನು ಕೆಡವಲು ನಗರದ ಸ್ಲಂ ನಿವಾಸಿಗಳಿಗೆ ನೋಟಿಸ್ ಕಳುಹಿಸುತ್ತಿದೆ ಎಂದು ಎಎಪಿಯ ಹಿರಿಯ ನಾಯಕ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
Related Articles
ತುಘಲಕಾಬಾದ್‌ನ ಕೊಳೆಗೇರಿ ಪ್ರದೇಶಕ್ಕೂ ಇದೇ ರೀತಿಯ ನೋಟಿಸ್ ಕಳುಹಿಸಲಾಗಿದ್ದು, 15 ದಿನಗಳೊಳಗೆ ಸ್ಥಳವನ್ನು ಖಾಲಿ ಮಾಡುವಂತೆ ಅಲ್ಲಿನ ನಿವಾಸಿಗಳಿಗೆ ಸೂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.