ತಿರುವನಂತಪುರ: ಕೇರಳದ ದೈತ್ಯ ಟೆಕ್ಸ್‌ಟೈಲ್ ಕಂಪೆನಿಯಾದ ಕೈಟೆಕ್ಸ್‌ನ ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಸಂಸ್ಥೆಯಾದ ಟ್ವೆಂಟಿ20 ಜತೆಗೆ ಆಮ್ ಆದ್ಮಿ ಪಾರ್ಟಿ (ಆಪ್) ಕೈ ಜೋಡಿಸಿದ್ದು, ಇವರೆಡೂ ಸೇರಿ ಪೀಪಲ್ಸ್ ವೆಲ್‌ಫೇರ್ ಅಲಯನ್ಸ್ (ಪಿಡಬ್ಲ್ಯುಎ) ಎಂಬ ಹೊಸ ಪಕ್ಷವನ್ನು ಅಸ್ತಿತ್ವಕ್ಕೆ ತಂದಿವೆ.
Advertisement
ಕೊಚ್ಚಿ ಬಳಿಯ ಕಿಳಕ್ಕಂಬಳಂನಲ್ಲಿರುವ ಸಮುದಾಯ ಭವನವೊಂದರಲ್ಲಿ ನಡೆದ ಸಮಾರಂಭ ದಲ್ಲಿ ಹೊಸ ಪಕ್ಷಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಆಪ್‌ನ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಟ್ವೆಂಟಿ20 ಸಂಸ್ಥೆಯ ಕೊ-ಆರ್ಡಿನೇಟರ್ ಸಬು ಎಂ. ಜಾಕೋಬ್ ಅವರು ಹಾಜರಿದ್ದರು.