Advertisement

AAP; ‘ಗೃಹ ಲಕ್ಷ್ಮಿ’ ಮಾದರಿ ಮಹಿಳೆಯರಿಗೆ ದಿಲ್ಲಿಯಲ್ಲೂ 1,000 ರೂ.

01:10 AM Mar 05, 2024 | Team Udayavani |

ಹೊಸದಿಲ್ಲಿ: ಕರ್ನಾಟಕದ “ಗೃಹ ಲಕ್ಷ್ಮಿ’ ಯೋಜನೆಯಂತೆ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದಿಲ್ಲಿ ಸರಕಾರ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ಸಹಾಯ ಧನ ನೀಡುವ ಯೋಜನೆಯನ್ನು ಸೋಮವಾರ ತನ್ನ ಬಜೆಟ್‌ನಲ್ಲಿ ಘೋಷಿಸಿದೆ.

Advertisement

“ಮುಖ್ಯಮಂತ್ರಿ ಸಮ್ಮಾನ್‌ ಯೋಜನೆ’ಯಡಿಯಲ್ಲಿ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ಪ್ರತೀ ತಿಂಗಳು ಈ ಹಣ ಪಾವತಿಯಾಗಲಿದೆ ಎಂದು ಬಜೆಟ್‌ ಮಂಡಿಸಿದ ಆತಿಷಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರತ್ರಿಕ್ರಿಯೆ ನೀಡಿದ ಕೇಜ್ರಿವಾಲ್‌ “ನಾವು ಮಹಿಳಾ ಸಶಕ್ತೀಕರಣ ಬಗ್ಗೆ ಮಾತನಾಡುತ್ತೇವೆ. ಆದರೆ ಅವರ ಬಳಿ ಹಣವಿದ್ದರೆ ಮಾತ್ರ ಇದು ಸಾಧ್ಯ. ನಾವು ಅವರಿಗೆ ಹಣ ನೀಡಿದರೆ, ಅವರು ತಾವು ಸಶಕ್ತರಾಗಿದ್ದೇವೆ ಎಂದು ಭಾವಿಸುತ್ತಾರೆ’ ಎಂದು ಹೇಳಿದರು.

ಹೈಕೋರ್ಟ್‌ ಜಮೀನು ಬಿಡಿ: ಆಪ್‌ಗೆ ಸುಪ್ರೀಂ
ಇಲ್ಲಿನ ರೋಸ್‌ ಅವೆನ್ಯೂನಲ್ಲಿ ದಿಲ್ಲಿ ಹೈಕೋರ್ಟ್‌ಗೆ ಸೇರಿದ ಜಾಗದಲ್ಲಿರುವ ಕಚೇರಿ ಯನ್ನು ಜೂ. 15ರೊಳಗೆ ತೆರವುಗೊಳಿಸು ವಂತೆ ಸುಪ್ರೀಂ ಕೋರ್ಟ್‌ ಆಪ್‌ಗೆ ನಿರ್ದೇಶನ ನೀಡಿದೆ.

ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಕಚೇರಿ ತೆರವು ಮಾಡುವ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಮುಂದಿನ 4 ವಾರಗಳಲ್ಲಿ ಸಂಬಂಧಪಟ್ಟ ಇಲಾಖೆ ಅರ್ಜಿ ಸ್ವೀಕಾರ ಸಂಬಂಧಿ ಸಿದಂತೆ ಇತರ ದಾಖಲಾತಿ ಕೆಲಸಗಳನ್ನು ಪೂರ್ಣ ಗೊಳಿಸಬೇಕು ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌, ನ್ಯಾ| ಮನೋಜ್‌ ಮಿಶ್ರಾ ಮತ್ತು ನ್ಯಾ| ಜೆ.ಬಿ. ಪದೀìವಾಲಾ ಅವರಿದ್ದ ಪೀಠ ಹೇಳಿದೆ.

ನೀವೇಕೆ ನ್ಯಾಯಾಂಗ ಪರವಿಲ್ಲ? ಸಿಂಘ್ವಿಗೆ ಸಿಜೆಐ ಪ್ರಶ್ನೆ?
ಪ್ರಕರಣದ ವಿಚಾರಣೆಯ ಸಮಯದಲ್ಲಿ ಆಪ್‌ ಪರ ವಾದಿಸಿದ ಅಭಿಷೇಕ್ ಮನು ಸಿಂಘ್ವಿ ಅವರನ್ನು ಉದ್ದೇಶಿಸಿ ಸಿಜೆಐ ಚಂದ್ರಚೂಡ್‌ ನೀವು ವಕೀಲರಾಗಿ ಯಾವಾಗಲೂ ಕೋರ್ಟ್‌ ಪರವಾಗಿ ನಿಲ್ಲಬೇಕು. ರಾಜಕೀಯ ಪಕ್ಷದ ಪರವಾಗಿ ಅಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next