Advertisement
ನಿತ್ಯ ಎಷ್ಟು ಮಂದಿಗೆ ಭೋಜನ?ಇಲ್ಲಿ ಪ್ರತಿನಿತ್ಯ 2000ಕ್ಕೂ ಹೆಚ್ಚಿನ ಭಕ್ತರು ಮಧ್ಯಾಹ್ನ ಭೋಜನ ಸವಿಯುತ್ತಾರೆ. ಭಾನುವಾರ, ಮಂಗಳವಾರ, ಶುಕ್ರವಾರ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ರಥೋತ್ಸವ ಹಾಗೂ ಚೌತಿಯಂದು 50 ಸಾವಿರಕ್ಕೂ ಅಧಿಕ ಭಕ್ತರು ಭೋಜನ ಪ್ರಸಾದ ಸವಿಯುತ್ತಾರೆ.
ಯಂತ್ರಗಳ ಮೋಡಿ
10 ಸಾವಿರ ಮಂದಿಗೆ ಅಡುಗೆ ಸಿದ್ಧಪಡಿಸುವ ಸಾಮರ್ಥ್ಯವಿರುವ ದೊಡ್ಡ ಗಾತ್ರದ ಬಾಯ್ಲರ್ ಇದೆ. ಅನ್ನ, ಪಾಯಸ, ಸಾಂಬಾರು ತಯಾರಿಕೆಗೆ ಇದು ಬಳಕೆಯಾಗುತ್ತಿದೆ. ಗ್ಯಾಸ್ ಸಿಲಿಂಡರ್‌ನಲ್ಲಿ ಅಡುಗೆ ತಯಾರಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಡಿಶ್‌ವಾಶ್ ವ್ಯವಸ್ಥೆ ಕೂಡಾ ಇದೆ.
– ನಿತ್ಯವೂ ಅನ್ನ- ತಿಳಿಸಾರು, ಸಾಂಬಾರು, ಚಟ್ನಿ, ಗಟ್ಟಿ ಪಲ್ಯ, ಪಾಯಸ.
– ಕುಂಬಳಕಾಯಿ, ಟೊಮೇಟೊ, ಬದನೆಕಾಯಿ, ಸೌತೆಕಾಯಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು… ಇಲ್ಲಿ ಹೆಚ್ಚು ಬಳಕೆಯಾಗುವ ತರಕಾರಿ. ಊಟದ ಸಮಯ
– ಮಧ್ಯಾಹ್ನ 12.45 ರಿಂದ 3 ಗಂಟೆ ತನಕ
– ಏಕಾದಶಿ, ಕೃಷ್ಣ ಜನ್ಮಾಷ್ಟಮಿ ಹಾಗೂ ಖಗ್ರಾಸ ಗ್ರಹಣದ ವೇಳೆ ಅನ್ನದಾನ ಸೇವೆ ಇರುವುದಿಲ್ಲ.
Related Articles
– ವ್ರತಾನುಷ್ಠಾನದಲ್ಲಿರುವ ಭಕ್ತರಿಗೆ ಬಾಳೆಎಲೆಯಲ್ಲಿ ಪ್ರತ್ಯೇಕ ಊಟ.
– ಭಕ್ತಾದಿಗಳಿಗೆ ಬಫೈ ವ್ಯವಸ್ಥೆಯ ಮೂಲಕ ಬಟ್ಟಲು ಊಟ ವ್ಯವಸ್ಥೆ.
– ಸಹಸ್ರ ನಾಳಿಕೇರ ಗಣಯಾಗ, ಕಡಬು ಸೇವೆ, ಅಷ್ಟೋತ್ತರ ಪೂಜೆ ನೆರವೇರಿಸಿದ ಭಕ್ತಾದಿಗಳಿಗೆ ಕಲ್ಲುಸಕ್ಕರೆ- ಕಡಲೆ ಪ್ರಸಾದ ಹಾಗೂ ದೇವಾಲಯದ ಬೆಲ್ಲದ ಪಂಚಕಜ್ಜಾಯ ವಿತರಣೆ ಇರುತ್ತದೆ.
ಭೋಜನ ಶಾಲೆ ಹೇಗಿದೆ?
ದೇಗುಲದ ಆವರಣದಲ್ಲಿಯೇ ಸುಸಜ್ಜಿತ ಶ್ರೀ ಸಿದ್ಧಿ ವಿನಾಯಕ ಭೋಜನಾ ಶಾಲೆ ಇದೆ. ಮೇಲಿನ ಮಹಡಿಯಲ್ಲೂ ಭೋಜನ ವಿತರಣೆ ವ್ಯವಸ್ಥೆಯಿದೆ. ಒಂದು ಸಲಕ್ಕೆ 2 ಸಾವಿರ ಮಂದಿ ಕುಳಿತು ಊಟ ಮಾಡಬಹುದು.
Advertisement
ಸಂಖ್ಯಾ ಸೋಜಿಗ2- ಕ್ವಿಂಟಲ್ ಅಕ್ಕಿ ನಿತ್ಯ ಬಳಕೆ
300- ಲೀಟರ್ ಸಾಂಬಾರು
100- ಕಾಯಿಯಿಂದ ಚಟ್ನಿ
3.5- ಕ್ವಿಂಟಲ್ ತರಕಾರಿ ನಿತ್ಯ ಬಳಕೆ
2000- ಸಾವಿರ ಭಕ್ತರಿಗೆ ನಿತ್ಯ ಅನ್ನಪ್ರಸಾದ
4- ಬಾಣಸಿಗರಿಂದ ಅಡುಗೆ ತಯಾರಿ
2,00,000- ಭಕ್ತರು ಕಳೆದ ವರ್ಷ ಭೋಜನ ಸವಿದವರು
– ಕೆ. ಶ್ರೀರಮಣ ಉಪಾಧ್ಯಾಯ , ಆಡಳಿತ ಧರ್ಮದರ್ಶಿಗಳು ಕಳೆದ 20 ವರ್ಷದಿಂದ ಶುಚಿ ರುಚಿಯಾದ ಅಡುಗೆ ತಯಾರಿಯನ್ನು ಶ್ರೀ ಗಣಪತಿಯ ಕೃಪೆಯಿಂದ ಅತ್ಯಂತ ಪ್ರಾಮಾಣಿಕವಾಗಿ ನಡೆಸುತ್ತಿದ್ದೇವೆ. ಇಂಥ ಪುಣ್ಯ ಸೇವೆ ನನಗೆ ಸಂತೃಪ್ತಿ ತಂದುಕೊಟ್ಟಿದೆ.
– ರಮೇಶ್ ಕಾರಂತ್ ನಾವುಂದ , ಹಿರಿಯ ಬಾಣಸಿಗ ದೇವರ ಪಾಕಶಾಲೆ
ಶ್ರೀ ವಿನಾಯಕ ದೇವಸ್ಥಾನ, ಆನೆಗುಡ್ಡೆ, ಕುಂದಾಪುರ ತಾ.ಆನೆಗುಡ್ಡೆಯ ಅನ್ನಭೋಜನ ಚಿತ್ರ ಲೇಖನ : ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ