ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಕಚೇರಿಯಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಅವರು ಪೂಜೆ ಸಲ್ಲಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಲಾಲ್ ಸಿಂಗ್ ಛಡ್ಡಾ ನಿರ್ದೇಶಕ ಅದ್ವೈತ್ ಚಂದನ್ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಈ ಪೂಜೆ ಮಾಡಲಾಗಿದೆ ಎಂಬ ವಿಚಾರ ಬಹಿರಂಗಗೊಂಡಿಲ್ಲ. ಆದರೆ, ಅಮೀರ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ಒಟ್ಟಿಗೇ ಆರತಿ ಎತ್ತುತ್ತಿರುವ, ಸುತ್ತಲೂ ಪ್ರೊಡಕ್ಷನ್ ಹೌಸ್‌ನ ಸಿಬ್ಬಂದಿ ನೆರೆದಿರುವಂಥ ಫೋಟೋ ಕೂಡ ಅದರಲ್ಲಿದೆ.
ಇತ್ತೀಚೆಗಷ್ಟೇ ಅಮೀರ್ ಅವರು ತಾವು ನಟನೆ-ನಿರ್ದೇಶನದಿಂದ ಒಂದು ವರ್ಷ ಕಾಲ ದೂರವಿದ್ದು, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಬೇಕೆಂದು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದರು.