ಮುಂಬಯಿ: ಬಾಲಿವುಡ್ ಭಾಯಿ ಸಲ್ಮಾನ್ ಖಾನ್ ʼ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಸಿನಿಮಾದ ಟೀಸರ್ ಇತ್ತೀಚೆಗೆ ಸೌಂಡ್ ಮಾಡಿದೆ. ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಇದಲ್ಲದೆ ʼಪಠಾಣ್ʼ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಲ್ಮಾನ್ ಈಗ ಮತ್ತೊಮ್ಮೆ ಬಿಗ್ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗಾಸಿಪ್ ಬಿಟೌನ್ ನಲ್ಲಿ ಹರಿದಾಡಿದೆ.
ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ಪ್ರೂಡಕ್ಷನ್ಸ್ ನಲ್ಲಿ ಸಲ್ಮಾನ್ ಖಾನ್ ಅವರಿಗೆ ಸಿನಿಮಾವೊಂದನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.
ಈಗಾಗಲೇ ಈ ಸಿನಿಮಾಕ್ಕಾಗಿ ಕಳೆದ 6 ತಿಂಗಳಿನಿಂದ ನಿರ್ದೇಶಕ ಆರ್.ಎಸ್.ಪ್ರಸನ್ನ ಅವರೊಂದಿಗೆ ಸ್ಕ್ರೀಪ್ಟಿಂಗ್ ಕೆಲಸದಲ್ಲಿ ಆಮಿರ್ ಖಾನ್ ನಿರತರಾಗಿದ್ದು, ಅಂತಿಮವಾಗಿ ಸ್ಕ್ರಿಪ್ಟ್ ರೆಡಿಯಾಗಿದೆ. ಈ ಸಿನಿಮಾಕ್ಕೆ ಸಲ್ಮಾನ್ ಅವರೇ ಸೂಕ್ತವೆಂದು ಆಮಿರ್ ಖಾನ್, ಸಲ್ಮಾನ್ ಅವರಿಗೆ ಆಫರ್ ನೀಡಿದ್ದಾರೆ. ಈ ಆಫರ್ ಗೆ ಸಲ್ಮಾನ್ ಖಾನ್ ಅವರು ಕೂಡ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸಲ್ಮಾನ್ ಖಾನ್ ಆಮಿರ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 1994 ʼಅಂದಾಜ್ ಅಪ್ನಾ ಅಪ್ನಾʼ ಸಿನಿಮಾದಲ್ಲಿ ಸಲ್ಮಾನ್ – ಆಮಿರ್ ಜೊತೆಯಾಗಿ ನಟಿಸಿದ್ದರು.
Related Articles
ಆಮಿರ್ ಖಾನ್ ಕಂಬ್ಯಾಕ್ ಮಾಡಬೇಕೆನ್ನುವುದು ಸಲ್ಮಾನ್ ಖಾನ್ ಅವರ ಆಸೆಯಾಗಿದ್ದು, ಆದಷ್ಟು ಬೇಗ ಬಿಗ್ ಕಂಬ್ಯಾಕ್ ಮಾಡಿ, ಎಂದು ಸಲ್ಮಾನ್ ಖಾನ್ ಅವರಿಗೆ ಸ್ಪೂರ್ತಿ ತುಂಬಿದ್ದಾರೆ ಎಂದು ವರದಿ ತಿಳಿಸಿದೆ.