ನವದೆಹಲಿ: ನವದೆಹಲಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಶೀಘ್ರವೇ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಈ ನಿಟ್ಟಿನಲ್ಲಿ ಅದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದರ ಜತೆಗೆ ನವದೆಹಲಿ ಮಹಾ ನಗರ ಪಾಲಿಕೆ ಮಂಡಲಿ ರಚಿಸಬೇಕು ಎಂಬ ಬೇಡಿಕೆಯನ್ನೂ ಮೇಯರ್ ಹುದ್ದೆಯ ಆಕಾಂಕ್ಷಿ ಶೆಲ್ಲಿ ಒಬೆರಾಯ್ ಪ್ರತಿಪಾದಿಸಿದ್ದಾರೆ.
ಅವರೇ ಈಗ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಶುಕ್ರವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಗಳು ಇವೆ. ಗುರುವಾರ ಕೂಡ ಸತತ 2ನೇ ಬಾರಿಗೆ ಬಿಜೆಪಿ ಮತ್ತು ಆಪ್ ಸದಸ್ಯರ ಗದ್ದಲದಿಂದಾಗಿ ಮೇಯರ್ ಆಯ್ಕೆ ನಡೆದಿರಲಿಲ್ಲ.
ಇದನ್ನೂ ಓದಿ: ಈ ರಾಜ್ಯದ ಎಲ್ಲ ನಿರುದ್ಯೋಗಿ ಯುವಕರಿಗೆ ಮುಂದಿನ ವಿತ್ತೀಯ ವರ್ಷದಿಂದ ಮಾಸಿಕ ಭತ್ಯೆ