Advertisement

ಆಧಾರ್‌ ಮಾಹಿತಿ ಹ್ಯಾಕ್‌: ನಿರಾಕರಿಸಿದ ಪ್ರಾಧಿಕಾರ

04:05 PM Sep 12, 2018 | Team Udayavani |

ಹೊಸದಿಲ್ಲಿ: ಕೋಟ್ಯಂತರ ಭಾರತೀಯರ ಆಧಾರ್‌ ಮಾಹಿತಿಯನ್ನು ಕದಿಯಬಹುದೆಂದು “ಹಫಿಂಗ್ಟನ್‌ ಪೋಸ್ಟ್‌ ಇಂಡಿಯಾ’ ಮಾಡಿರುವ ವರದಿಯನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನಿರಾಕರಿಸಿದೆ. 

Advertisement

ಮಾರುಕಟ್ಟೆಗಳಲ್ಲಿ ಕೇವಲ 2,500 ರೂ.ಗಳ ಬೆಲೆಗೆ ಸಿಗುವ ಕೆಲವು ಸಾಫ್ಟ್ವೇರ್‌ಗಳಿಂದ ತಾನು ಆಧಾರ್‌ ಡೇಟಾಬೇಸ್‌ಗೆ ನೇರವಾಗಿ ಲಗ್ಗೆ ಹಾಕಿ ಅದರಲ್ಲಿದ್ದ ಕೋಟ್ಯಂತರ ಭಾರತೀ ಯರ ಬಯೋಮೆಟ್ರಿಕ್‌ ಮಾಹಿತಿಗಳನ್ನು ಕದ್ದಿದ್ದು, ಇದನ್ನು ಹಲವಾರು ತಜ್ಞರೂ ಅನೇಕ ಪರೀಕ್ಷೆಗಳ ಮೂಲಕ ದೃಢಪಡಿಸಿದ್ದಾರೆಂದು “ಹಫಿಂಗ್ಟನ್‌ ಪೋಸ್ಟ್‌ ಇಂಡಿಯಾ’ ಹೇಳಿತ್ತು. 

ಈ ವರದಿಯನ್ನು ನಿರಾಕರಿಸಿರುವ ಯುಐಡಿಎಐ, ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿ ನಿಂದ ಇಂಥ ವರದಿ ತಯಾರಿಸಲಾಗಿದೆ. ಆಧಾರ್‌ ಮಾಹಿತಿ ಅತ್ಯಂತ ಸುರಕ್ಷಿತವಾಗಿದ್ದು, ಆ ಮಾಹಿತಿಗಳುಳ್ಳ ಡೇಟಾಬೇಸ್‌ ಅನ್ನು ಸಾಫ್ಟ್ ವೇರ್‌ ಪ್ಯಾಚ್‌ಗಳಿಂದ ಭೇದಿಸಬಹುದು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದೆ. 

ವೆಬ್‌ಸೈಟ್‌ ಹ್ಯಾಕ್‌: ಪ್ರತಿಷ್ಠಿತ ಐಎಎಸ್‌, ಐಪಿಎಸ್‌ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧಿಕೃತ ವೆಬ್‌ಸೈಟ್‌ ಸೋಮವಾರ ಸಂಜೆ ವೇಳೆಗೆ ಹ್ಯಾಕ್‌ ಆಗಿದೆ. ವೆಬ್‌ಸೈಟ್‌ನ ಹೋಂ ಪೇಜ್‌ನಲ್ಲಿ ಪ್ರಖ್ಯಾತ ಡೋರಮನ್‌ ಕಾಟೂìನ್‌ ಅನ್ನು ಡಿಸ್‌ಪ್ಲೇ ಮಾಡಲಾಗಿದೆ. ಜತೆಗೆ ಪುಟ್ಟದೊಂದು ಹೃದಯದ ಸಾಂಕೇತಿಕ ಚಿತ್ರ, “”ಡೋರೆಮನ್‌, ಪಿಕಪ್‌ ದ ಕಾಲ್‌!!!” ,  “”ಐ ಆ್ಯಮ್‌ ಸ್ಟೆವ್‌ಪೀಡ್‌” ಎಂಬ ಬರಹವೂ ಕಾಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next