ಹೊಸದಿಲ್ಲಿ: ನೇಪಾಳ, ಭೂತಾನ್‌ಗೆ ತೆರಳಲು 15 ವರ್ಷಕ್ಕಿಂತ ಕೆಳಗಿನವರಿಗೆ, 65 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ಇದ್ದರೆ ಸಾಕು. ಈಗಾ ಗಲೇ ಈ ದೇಶಗಳಿಗೆ ಭಾರತೀಯರು ವೀಸಾ ಇಲ್ಲದೇ ಪ್ರಯಾಣಿಸಬಹುದಾಗಿದ್ದು, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಹಾಗೂ ಇತರ ಸರಕಾರಿ ಗುರುತಿನ ದಾಖಲೆಗಳನ್ನು ಹೊಂದಿರುವುದು ಅಗತ್ಯ ವಾಗಿತ್ತು. ಇದೀಗ ಈ ಪಟ್ಟಿಗೆ ಆಧಾರ್ ಕಾರ್ಡ್ ಕೂಡ ಸೇರ್ಪಡೆಯಾಗಿದೆ. ಈ ಸಂಬಂಧ ಗೃಹ ಸಚಿವಾಲಯ ಪ್ರತ್ಯೇಕ ಆದೇಶವನ್ನು ಹೊರಡಿಸಿದೆ. ಆದರೆ 15 ರಿಂದ 65 ವರ್ಷದೊಳಗಿನವರಿಗೆ ಆಧಾರ್ ಕಾರ್ಡನ್ನು ಪರಿಗಣಿಸುವುದಿಲ್ಲ. ಈ ವಯೋಮಿತಿಯವರಿಗೆ ಪಾನ್‌ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಇತರ ದಾಖಲೆಗಳನ್ನು ಹೊಂದಿರುವುದು ಅಗತ್ಯ. ಸದ್ಯ ಕುಟುಂಬ ಸಮೇತವಾಗಿ ಪ್ರಯಾಣಿಸುತ್ತಿದ್ದರೆ ಕುಟುಂಬದ ಎಲ್ಲರೂ ಗುರುತಿನ ಚೀಟಿ ಹೊಂದಿರುವ ಅಗತ್ಯವಿಲ್ಲ. ಒಬ್ಬರ ಬಳಿ ಗುರುತಿನ ಚೀಟಿ ಇದ್ದು, ಇತರರ ಬಳಿ ರೇಶನ್ ಕಾರ್ಡ್ ಅಥವಾ ಇತರ ದಾಖಲೆ ಇದ್ದರೆ ಸಾಕು. ಇನ್ನು ಮಕ್ಕಳಿ ಗಾದರೆ ಶಾಲೆಯ ಪ್ರಿನ್ಸಿಪಾಲ್ ನೀಡುವ ಪತ್ರ ಅಗತ್ಯವಿತ್ತು. ಸದ್ಯ ಆಧಾರ್ ಕಾರ್ಡ್ ಅನ್ನೂ ಈ ಪಟ್ಟಿಯಲ್ಲಿ ಸೇರಿಸಿರುವುದ ರಿಂದ, ಮುಂದಿನ ದಿನಗಳಲ್ಲಿ ಎಲ್ಲ ವಯೋ ಮಾನದವರಿಗೂ ಈ ನಿಯಮ ವನ್ನು ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.