Advertisement

ವಾರದ 7 ದಿನವೂ ತೆರೆಯಲಿದೆ ಆಧಾರ್‌ ಸೇವಾ ಕೇಂದ್ರಗಳು

09:36 AM Nov 22, 2019 | mahesh |

ಹೊಸದಿಲ್ಲಿ : ಆಧಾರ್‌ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ಮನವಿಗಳು ಹೆಚ್ಚುತ್ತಿದ್ದು, ಇನ್ನು ಮುಂದೆ ವಾರದ 7 ದಿನಗಳು ಆಧಾರ್‌ ಸೇವಾ ಕೇಂದ್ರ ತೆರೆಯಲ್ಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

Advertisement

ಒಂದು ಸೇವಾ ಕೇಂದ್ರ ದಿನದಲ್ಲಿ 1,000 ಆಧಾರ್‌ ಕಾರ್ಡ್‌ ದಾಖಲಾತಿ ಅಥವಾ ನವೀಕರಣ ಮನವಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದ್ದು, ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿ ಕುರಿತಂತೆ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ಮನವಿಗಳು ನಿಗದಿತ ಅಂಕಿಗಿಂತ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಜನರಿಗೆ ನೆರವಾಗಲು ವಾರದ 7 ದಿನವೂ ಆಧಾರ್‌ ಸೇವಾ ಕೇಂದ್ರ ತೆರೆಯಬೇಕು ಎಂಬ ನಿರ್ಧಾರವನ್ನು ಯುಎಡಿಎಐ ತೆಗೆದುಕೊಂಡಿದೆ ಎನ್ನಲಾಗಿದೆ.

ಆಧಾರ್‌ ಸೇವಾ ಕೇಂದ್ರಗಳಲ್ಲಿ ನೂತನ ಆಧಾರ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಅಥವಾ ದಾಖಲಾತಿ ಮಾಡುವುದರ ಜತೆಗೆ ನಿಮ್ಮ ವಿಳಾಸ, ಮೊಬೈಲ್‌ ಸಂಖ್ಯೆ, ಇ- ಮೇಲ್‌ ಐಡಿ, ಜನ್ಮ ದಿನಾಂಕ ಸೇರಿದಂತೆ ಇತರ ಮಾಹಿತಿ ನವೀಕರಸಬಹುದು. ಸಮೀಪದ ಆಧಾರ್‌ ಸೇವಾ ಕೇಂದ್ರಗಳನ್ನು ಪತ್ತೆಹಚ್ಚಲು ಯುಎಡಿಎಐ ವೆಬ್ ಸೈಟ್‌ನ ಬುಕ್‌ ಎನಾ ಅಪಾಯಿಂಟ್‌ಮೆಂಟ್‌ ಪೇಜ್‌ಗೆ ಭೇಟಿ ನೀಡಬೇಕು. ಅಲ್ಲಿನ ಡ್ರಾಪ್‌ಡೌನ್‌ ಮೆನುವಿನಲ್ಲಿ ಪ್ರಸ್ತುತ ಆಧಾರ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಥಳಗಳ ಹೆಸರುಗಳಿವೆ.

ಯುಐಡಿಎಐ ವೆಬ್ ಸೈಟ್‌ನಲ್ಲಿ ಪ್ರದರ್ಶಿಸಿರುವಂತೆ ಪ್ರಸ್ತುತ ಕನಿಷ್ಠ 19 ಕ್ರಿಯಾತ್ಮಕ ಆಧಾರ್‌ ಸೇವಾ ಕೇಂದ್ರಗಳಿವೆ. 2019ರ ಅಂತ್ಯದ ವೇಳೆಗೆ ದೇಶದ 53 ನಗರಗಳಲ್ಲಿ 114 ಕೇಂದ್ರಗಳನ್ನು ತೆರೆಯಲು ಯೋಜಿಸಿದೆ. ಸಮೀಪದ ಆಧಾರ್‌ ಸೇವಾ ಕೇಂದ್ರಗಳನ್ನು ಪತ್ತೆಹಚ್ಚಲು ಯುಐಡಿಎಐ ವೆಬ್‌ಸೈಟ್‌ನ ಬುಕ್‌ ಎನ್‌ ಅಪಾಯಿಂಟ್‌ಮೆಂಟ್‌ ಪೇಜೆಗೆ ಭೇಟಿ ನೀಡಬೇಕು. ಅಲ್ಲಿನ ಡ್ರಾಪ್‌ ಡೌನ್‌ ಮೆನುವಿನಲ್ಲಿ ಪ್ರಸ್ತುತ ಆಧಾರ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಥಳಗಳ ಹೆಸರುಗಳಿವೆ. ಬೆಂಗಳೂರು, ದೆಹಲಿ, ಪಾಟ್ನಾ, ಹೈದರಾಬಾದ್‌, ಆಗ್ರಾ, ಚೆನ್ನೈ, ಹಿಸಾರ್‌, ಲಖನೌ, ವಿಜಯವಾಡ, ಭೋಪಾಲ್, ಡೆಹ್ರಾಡೂನ್‌, ರಾಂಚಿ, ಗುವಾಹಟಿ, ಮೈಸೂರು ಮತ್ತು ಜೈಪುರ ಸೇರಿದಂತೆ ಹಲವು ಸ್ಥಳಗಳ ಹೆಸರುಗಳಿವೆ. ನಿಮ್ಮ ಆಯ್ಕೆಯ ಕೇಂದ್ರವನ್ನು ಆಯ್ದು ನಿಮ್ಮ ಮೊಬೈಲ್‌ ನಂಬರ್‌ ನೀಡುವ ಮೂಲಕ ಅಪಾಯಿಂಟ್‌ಮೆಂಟ್‌ ಕಾಯ್ದಿರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next