Advertisement

ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ ಸೌಲಭ್ಯ

10:59 PM Nov 28, 2019 | Sriram |

ಉಡುಪಿ: ಆಧಾರ್‌ ಕಾರ್ಡ್‌ನಲ್ಲಿರುವ ಹೆಸರು, ಜನ್ಮ ದಿನಾಂಕ, ವಿಳಾಸದ ಬದಲಾವಣೆ ಅಥವಾ ತಿದ್ದುಪಡಿ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲೆಯ ಅಂಚೆ ಇಲಾಖೆಗಳಲ್ಲಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿದ್ದು, ಈ ಕೆಳಕಂಡ ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ ಆಧಾರ್‌ ಕಾರ್ಡ್‌ಗಳನ್ನು ನೋಂದಣಿ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Advertisement

ಆಧಾರ್‌ ತಿದ್ದುಪಡಿಗೆ ಅವಕಾಶವಿರುವ ಬ್ಯಾಂಕ್‌ ಶಾಖೆಗಳು
ಉಡುಪಿ ಇಂಡಿಯನ್‌ ಬ್ಯಾಂಕ್‌, ಹೆಬ್ರಿಯ ಫೆಡರಲ್‌ ಬ್ಯಾಂಕ್‌, ಉಡುಪಿ ಕುಂಜಿಬೆಟ್ಟುವಿನ ಕರ್ನಾಟಕ ಬ್ಯಾಂಕ್‌, ಕಾರ್ಕಳದ ಕೆಜಿ ಬ್ಯಾಂಕ್‌, ಕುಂದಾಪುರದ ಕೆನರಾ ಬ್ಯಾಂಕ್‌, ಬ್ರಹ್ಮಾವರದ ವಿಜಯ ಬ್ಯಾಂಕ್‌, ಉಡುಪಿ ಕೋರ್ಟ್‌ ರೋಡಿನ ಎಚ್‌. ಡಿ.ಎಫ್.ಸಿ. ಬ್ಯಾಂಕ್‌, ಕಾರ್ಕಳ ಬಸ್‌ ನಿಲ್ದಾಣದ ವಿಜಯ ಬ್ಯಾಂಕ್‌, ಕಾರ್ಕಳದ ಕೆನರಾ ಬ್ಯಾಂಕ್‌, ಉಡುಪಿಯ ಕೆನರಾ ಬ್ಯಾಂಕ್‌, ಮಜೂರು ಕಾಪುವಿನ ಕೆನರಾ ಬ್ಯಾಂಕ್‌, ಕುಂದಾಪುರ ಹೆಮ್ಮಾಡಿಯ ಕೆಜಿಬಿ ಬ್ಯಾಂಕ್‌, ಉಡುಪಿ ಬನ್ನಂಜೆಯ ವಿಜಯಾ ಬ್ಯಾಂಕ್‌ ಶಾಖೆ.

ಅಂಚೆ ಕಚೇರಿಗಳು
ನಿಟ್ಟೆ, ಕಾರ್ಕಳ ಗಾಂಧಿ ಮೈದಾನ ರೋಡ್‌, ಕಾಪು ಸಬ್‌ ಪೋಸ್ಟ್‌ ಆಫೀಸ್‌, ಕುಂದಾಪುರ ಗಾಂಧಿ ಮೈದಾನ, ಮಣಿಪಾಲ ಪ್ರಧಾನ ಅಂಚೆ ಕಚೇರಿ, ಉಡುಪಿ ಹೆಡ್‌ ಪೋಸ್ಟ್‌ ಆಫೀಸ್‌, ಕಾರ್ಕಳ ಬೈಲೂರು, ಕೋಟ ಉಪ ಅಂಚೆ ಕಚೇರಿ, ಅಜೆಕಾರು, ಪಡುಬಿದ್ರೆ, ಕಾರ್ಕಳ ಬಝಾರ್‌ ಅಂಚೆ ಕಚೇರಿ, ಬೆಳ್ಮಣ್‌, ಉಡುಪಿ ಕುಂಜಿಬೆಟ್ಟು, ಸಾಲಿಗ್ರಾಮ, ಹೆಬ್ರಿ, ವಂಡ್ಸೆ, ತಲ್ಲೂರು, ಪಡುಬಿದ್ರೆ ಉಪ ಕಚೇರಿ, ಪೆರ್ಡೂರು, ಪರ್ಕಳ, ಪೀಲಾರು, ಕೊಕ್ಕರ್ಣೆ, ಬಾರಕೂರು, ಹಿರಿಯಡ್ಕ, ಶಂಕರನಾರಾಯಣ, ಸಾಸ್ತಾನ, ಗಂಗೊಳ್ಳಿ, ಬ್ರಹ್ಮಾವರ, ಮುಂಡ್ಕೂರು, ಉದ್ಯಾವರ, ಮಲ್ಪೆ, ಉಡುಪಿ ಕ್ರೋಢಾಶ್ರಮ, ಮಲ್ಪೆ, ಉದ್ಯಾವರ, ಬಾರಕೂರು, ಕುಂದಾಪುರ ಶಾಸ್ತ್ರೀ ಸರ್ಕಲ್‌, ಬಸೂÅರು, ಶಿರ್ವ ಉಪ ಅಂಚೆ ಕಚೇರಿ, ಸಿದ್ದಾಪುರ, ಸಾಸ್ತಾನ ಉಪ ಕಚೇರಿ, ಕೋಟೇಶ್ವರ, ಉಡುಪಿ ಅಂಬಲಪಾಡಿ ಉಪಕಚೇರಿ, ಕೆಮ್ಮಣ್ಣು, ಹೆಜಮಾಡಿ, ಮೂಡುಬೆಳ್ಳೆ ಉಪಕಚೇರಿ, ತಲ್ಲೂರು, ಕುಂದಾಪುರ ಹೆಡ್‌ ಪೋಸ್ಟ್‌ ಆಫೀಸ್‌, ಶಂಕರಪುರ, ಕೊಲ್ಲೂರು, ತ್ರಾಸಿ, ಕಲ್ಯಾಣಪುರ, ಕುಕ್ಕಂದೂರು, ಶಿರೂರು ಕೆಳಪೇಟೆ, ಶಿರೂರು ಉಪ ಕಚೇರಿ.

ಈ ಕೇಂದ್ರಗಳಲ್ಲಿ ಕೆಲಸ ನಿರ್ವಸುತ್ತಿರುವ ಆಪರೇಟರ್‌ಗಳು ಅಂಚೆ ಇಲಾಖೆಯ ಕೆಲಸದೊಂದಿಗೆ ಪ್ರತಿ ದಿನಕ್ಕೆ 20ರಿಂದ 40 ಜನರ ನೋಂದಣಿ ತಿದ್ದುಪಡಿ ನಡೆಸಲಾಗುತ್ತದೆ. ಸಾರ್ವಜನಿಕರು ಈ ಕೇಂದ್ರಗಳಲ್ಲಿ ಕೂಡ ಆಧಾರ್‌ ನೋಂದಣಿಯನ್ನು ಮಾಡಿಸಬಹುದು.

ಅಲ್ಲದೇ ತಾಲೂಕು ಕಚೇರಿ ಕುಂದಾಪುರ, ಕಾರ್ಕಳ, ಉಡುಪಿ, ಬ್ರಹ್ಮಾವರ, ಬೈಂದೂರು, ಕಾಪು, ನಾಡ ಕಚೇರಿಗಳಾದ ಕೋಟ, ವಂಡ್ಸೆ, ಅಜೆಕಾರು ಇಲ್ಲಿರುವ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಪಂದನ ಕೇಂದ್ರಗಳಲ್ಲಿ ಸಾರ್ವಜನಿಕರು ಹೊಸತಾಗಿ ಆಧಾರ್‌ ಕಾರ್ಡ್‌ ನೋಂದಣಿ ಹಾಗೂ ತಿದ್ದುಪಡಿಗಳನ್ನು ಮಾಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next