ಬೀದರ: ಜಿಲ್ಲೆಯ ನಿವಾಸಿಗಳಿಗೆ ಆಧಾರ್ ನೋಂದಣಿ ಮಾಡಿಸಲು ಹಾಗೂ ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಬಯೋಮೆಟ್ರಿಕ್ ಅಪಡೇಟ್ ಹೀಗೆ ಅನೇಕ ರೀತಿಯ ಬದಲಾವಣೆ ಮಾಡಲು ಜಿಲ್ಲೆಯಲ್ಲಿ ಆಧಾರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯ ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ, ಔರಾದ ತಾಲೂಕಿನ ಎಲ್ಲ ಹೋಬಳಿ ಮಟ್ಟದಲ್ಲಿ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ (ನಾಡ ಕಚೇರಿ), ಅಂಚೆ ಕಚೇರಿ, ಬಿಎಸ್ಸೆನ್ನೆಲ್ ಕಚೇರಿ, ಬ್ಯಾಂಕುಗಳಲ್ಲಿ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಗ್ರಾಮಸ್ಥರು ನೋಂದಣಿ ಕಾರ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಸ್ಥಳ ವಿವರ: ಬೀದರ ಸಿಟಿ ಮತ್ತು ತಾಲೂಕು: ಜಿಲ್ಲೆಯ ಎಲ್ಲ ಹೋಬಳಿ ಮಟ್ಟದ ಹಾಗೂ ತಾಲೂಕಿನ ಅಟಲ್ ಜೀ ಜನಸ್ನೇಹಿ ಕೇಂದ್ರ (ನಾಡ ಕಚೇರಿ), ಕರ್ನಾಟಕ ಒನ್ ಕೇಂದ್ರ ನೌಬಾದ (ಬುಡಾ ಕಚೇರಿ) ಬೀದರ (ಈ ಕೇಂದ್ರ ರವಿವಾರ ಕೂಡ ಕಾರ್ಯನಿರ್ವಸುತ್ತಿದೆ, ಸ್ಪಂದನಾ ಕೇಂದ್ರ ಡಿಸಿ ಕಚೇರಿ ಬೀದರ. (ವೃದ್ಧರು, ಅಂಗವಿಕಲರು ಹಾಗೂ ಸಮಸ್ಯೆ ಉಳ್ಳವರಿಗೆ ಮಾತ್ರ ನೋಂದಣಿ) ಮತ್ತು ಬೀದರ ನಗರದ ಅಂಚೆ ಕಚೇರಿ, ಬಿಇಒ ಕಚೇರಿ ಹತ್ತಿರ ಬೀದರ., ಅಂಚೆ ಕಚೇರಿ, ಗಾಂಧಿ ಗಂಜ್ ಬೀದರ, ಗುರುನಾನಕ ಝೀರಾ ಬೀದರ ಮತ್ತು ಬೀದರ ನಗರದ ಎಕ್ಸಿಸ್ ಬ್ಯಾಂಕ್ ಬಿವಿಬಿ ಕಾಲೇಜ್ ರೋಡ್ ಬೀದರ, ಐಸಿಐಸಿಐ ಬ್ಯಾಂಕ್, ರಿಲಾಯನ್ಸ್ ಪೆಟ್ರೋಲ್ ಪಂಪ್ ಹತ್ತಿರ, ಉದಗಿರ ರೋಡ್ ಬೀದರ, ಕೆನರಾ ಬ್ಯಾಂಕ್ ಮುಖ್ಯ ಶಾಖೆ, ನೆಹರು ಕ್ರೀಡಾಂಗಣ ರಸ್ತೆ ಬೀದರ, ಕಾರ್ಪೊರೇಶನ್ ಬ್ಯಾಂಕ್ ಮೋಹನ್ ಮಾರ್ಕೇಟ್ ಬೀದರ, ಇಂಡಿಯನ್ ಓವರಸಿಸ್ ಬ್ಯಾಂಕ್ ಬೀದರ, ಎಸ್‌ಬಿಐ, ಎಡಿಬಿ ಶಾಖೆ ಹತ್ತಿರ, ನಂದಿ ಪೆಟ್ರೋಲ್ ಪಂಪ್ ಬೀದರ, ಸಿಂಡಿಕೇಟ್ ಬ್ಯಾಂಕ್ ಏರ್ ಫೋರ್ ರೋಡ್ ಬೀದರ, ಬಿಎಸ್ಸೆನ್ನೆಲ್ ಕಚೇರಿ, ಅಂಬೇಡ್ಕರ್ ಸರ್ಕಲ್ ಬೀದರ.
ಬಸವಕಲ್ಯಾಣ ತಾಲೂಕು: ಎಸ್‌ಬಿಐ ಬ್ಯಾಂಕ್ ಬಸವಕಲ್ಯಾಣ, ಅಂಚೆ ಕಚೇರಿ ಬಸವಕಲ್ಯಾಣದಲ್ಲಿ ಆಧಾರ್ ನೋಂದಣಿ
ಮಾಡಬಹುದು.
ಹುಮನಾಬಾದ ತಾಲೂಕು: ಅಂಚೆ ಕಚೇರಿ (ದೂರವಾಣಿ ಕಚೇರಿ ಹತ್ತಿರ., ಕೃಷ್ಣಾ ಗ್ರಾಮೀಣ ಬ್ಯಾಂಕ್, ಎಸ್‌ಬಿಐ ಬ್ಯಾಂಕ್ ಹುಮನಾಬಾದ, ಹಳೇ ತಹಶೀಲ್ದಾರ್ ಕಾರ್ಯಾಲಯ ಹುಮನಾಬಾದ.
ಔರಾದ ತಾಲೂಕು: ಅಂಚೆ ಕಚೇರಿ, ಕೆಜಿಬಿ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಕೆನರಾ ಬ್ಯಾಂಕ್.
ಭಾಲ್ಕಿ ತಾಲೂಕು: ಅಂಚೆ ಕಚೇರಿ, ಎಸ್‌ಬಿಐ ಬ್ಯಾಂಕ್‌ನಲ್ಲಿಆಧಾರ್ ನೋಂದಣಿ ಮಾಡಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.