Advertisement

ಅಕ್ರಮ ಮತದಾನ ತಡೆಗೆ ಆಧಾರ್‌ ಲಿಂಕ್‌

03:20 PM Nov 30, 2022 | Team Udayavani |

ಬಂಗಾರಪೇಟೆ: ದೇಶದಲ್ಲಿ ಒಬ್ಬರಿಗೆ ಒಂದು ಸ್ಥಳದಲ್ಲಿ ಒಂದು ಮತದಾನ ಹಕ್ಕನ್ನು ನೀಡುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಸೂಚನೆ ನೀಡಿ ರುವ ಆದೇಶದಂತೆ ಮತದಾರರ ಚೀಟಿ ಆಧಾರ್‌ ಕಾರ್ಡ್‌ಗಳಿಗೆ ಲಿಂಕ್‌ ಮಾಡುವ ಕಾರ್ಯವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಶೇ. 79 ಮುಗಿದಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟ್‌ ರಾಜಾ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿಗೆ ಪ್ರತಿ ಮಂಗಳವಾರ ಒಂದೊಂದು ತಾಲೂಕಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕಾರ್ಯಕ್ರಮಕ್ಕೆ ಡೀಸಿ ಚಾಲನೆ ನೀಡಿ ಮಾತನಾಡಿದರು. ಇಡೀ ಜಿಲ್ಲೆಯಲ್ಲಿ ಎಲ್ಲಾ ಕಡೆ ಯಶಸ್ವಿಯಾಗಿ ನಡೆಯುತ್ತಿದ್ದು, ಪಟ್ಟಣದ ವ್ಯಾಪ್ತಿಯಲ್ಲಿ ಕಡಿಮೆ ಶೇಖಡವಾರು ಲಿಂಕ್‌ ಮಾಡುತ್ತಿದ್ದು, ಈ ಕೂಡಲೇ ಪುರಸಭೆ ಅಧಿಕಾರಿ ಸಿಬ್ಬಂದಿಯೊಂದಿಗೆ ಎಲ್ಲಾ ಬಿಎಲ್‌ಒಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರಸ್ತುತ ಹಳ್ಳಿಯಿಂದ ಪಟ್ಟಣಕ್ಕೆ ಸಾಕಷ್ಠು ಜನರು ಬಂದು ವಾಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ಮತಗಳು ಎರಡೂ ಕಡೆ ಇದ್ದು ಎರಡೂ ಕಡೆ ಮತದಾನ ಮಾಡುವ ಪ್ರಕರಣಗಳಿದ್ದು, ಇದೆಲ್ಲವು ಕಾನೂನು ವಿರೋಧವಾಗಿದ್ದು, ಒಬ್ಬ ವ್ಯಕ್ತಿಗೆ ಒಂದು ಚುನಾವಣೆಗೆ ಒಂದು ಮತದಾನ ಎಂಬ ಕಾನೂನನ್ನು ಜಾರಿಗೆ ತಂದಿರುವುದರಿಂದ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿದರೆ ಅಕ್ರಮ ಮತದಾನವನ್ನು ತಡೆ ಗಟ್ಟುವ ಉದ್ದೇಶದಿಂದ ಈ ಯೋಜನೆ ಸಮರ್ಪಕ ವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕಾರಿಡಾರ್‌ ರಸ್ತೆ ನಿರ್ಮಾಣ ಮಾಡುತ್ತಿದ್ದು, ಈ ರಸ್ತೆಗೆ ಬರುವ ಕೆಲವು ಪಿ ನಂಬರ್‌ ಗಳ ಜಮೀನುಗಳಿಗೆ ಸೂಕ್ತ ದಾಖಲೆಗಳಿಲ್ಲದೇ ಇರುವುದರಿಂದ ಇಂತಹವರಿಗೆ ಪರಿಹಾರ ಬಂದಿಲ್ಲ. ಇಂತಹ ಪಿ ನಂಬರ್‌ ಜಮೀನುಗಳ ರೈತರಿಗೆ ಹಲವಾರು ಬಾರಿ ಜಮೀನು ಮಂಜೂರಾದ ಸಾಗುವಳಿ ಚೀಟಿ ಸೇರಿದಂತೆ ಭೂ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದರೂ ಇದುವರೆಗೂ ದಾಖಲೆಗಳನ್ನು ಸಲ್ಲಿಸಿಲ್ಲ. ಈ ಹಿನ್ನಲೆಯಲ್ಲಿ ಅಂತಹ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಸೂಕ್ತ ದಾಖಲೆ ಒದಗಿಸಿದರೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್‌ ಎಂ.ದಯಾನಂದ್‌, ಪುರಸಭೆ ಮುಖ್ಯಾಧಿಕಾರಿ ಜಿ.ಎನ್‌.ಚಲಪತಿ, ಅಪರ ಶಿರಸ್ತೇದಾರ್‌ ಚಂದ್ರಶೇಖರ್‌, ಕಂದಾಯ ನಿರೀಕ್ಷಕ ಅಜಯ್‌ ಇತರರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next