Advertisement

ಆಧಾರ್‌ ಲಿಂಕ್‌ ಗಡುವು ವಿಸ್ತರಣೆ ಸಾಧ್ಯತೆ

12:25 PM Mar 07, 2018 | Team Udayavani |

ಹೊಸದಿಲ್ಲಿ: ಸರಕಾರಿ ಸೇವೆಗಳು, ಮೊಬೈಲ್‌ ಸಂಪರ್ಕಕ್ಕೆ ಆಧಾರ್‌ ಲಿಂಕ್‌ ಮಾಡುವ ಕೊನೆಯ ದಿನಾಂಕ ಮಾ.31ನ್ನು ವಿಸ್ತರಿಸುವ ಸಾಧ್ಯತೆ ಇದೆ. ಹೀಗೆಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠದ ಮುಂದೆ ಆಧಾರ್‌ ಲಿಂಕ್‌ಗೆ ಕುರಿತ ವಿಚಾರಣೆ ಪುನರಾರಂಭ ವೇಳೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ನ್ಯಾಯಪೀಠಕ್ಕೆ ಈ ಸುಳಿವು ನೀಡಿದ್ದಾರೆ. ಈ ಹಿಂದೆ ಕೂಡ ಕೊನೆಯ ದಿನಾಂಕವನ್ನು ಸರಕಾರ ವಿಸ್ತರಿಸಿತ್ತು ಎಂದು ವೇಣುಗೋಪಾಲ್‌ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಇದೊಂದು ಉತ್ತಮ ಅಂಶ. ಅರ್ಜಿದಾರರ ಪರ ವಕೀಲರು ಇದೇ ಅಂಶವನ್ನು ಪದೇ ಪದೆ ಪ್ರಸ್ತಾವಿಸಲು ಅವಕಾಶ ಕೊಡುವುದಿಲ್ಲ ಎಂದೂ ಹೇಳಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next