ಹೊಸದಿಲ್ಲಿ: ಒಮ್ಮೆ ವ್ಯಕ್ತಿ ಮೃತಪಟ್ಟು, ಮರಣ ಪ್ರಮಾಣ ಪತ್ರ ವಿತರಣೆಯಾದರೆ, ಆತನ ಆಧಾರ್ ಕಾರ್ಡ್ ಕೂಡ ನಿಷ್ಕ್ರಿಯವಾಗಲಿದೆ.
ಈ ಕ್ರಮವನ್ನು ಅನುಷ್ಠಾನಕ್ಕೆ ತರಲು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್ ಕ್ರಮ ಕೈಗೊಳ್ಳುತ್ತಿವೆ.
“ಮರಣ ಪ್ರಮಾಣ ಪತ್ರ ಪಡೆಯಲು ಮೃತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಕುಟುಂಬದವರು ನೀಡಬೇಕು. ಸಂಬಂಧಪಟ್ಟ ಇಲಾಖೆಯಿಂದ ಮರಣ ಪ್ರಮಾಣಪತ್ರ ವಿತರಣೆ ಯಾದ ಅನಂತರ ಮೃತ ವ್ಯಕ್ತಿಯ ಕುಟುಂಬದವರನ್ನು ಸಂಪರ್ಕಿಸಲಾಗುವುದು. ಅವರ ಒಪ್ಪಿಗೆ ಬಳಿಕ ಮಾತ್ರ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು. ಈ ಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ’ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಿಳಿಸಿದರು.