Advertisement

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

12:36 PM Apr 21, 2024 | Team Udayavani |

ಇತ್ತೀಚೆಗೆ ಮಾರ್ಕ್‌ ಜುಕರ್‌ ಬರ್ಗ್‌ ಮಾಲಕತ್ವದ ಮೆಟಾ ಸಂಸ್ಥೆಯ ಫೇಸ್ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ ಸೇವೆ ಸುಮಾರು ಒಂದೂವರೆ ಗಂಟೆಗಳ ಕಾಲ ವ್ಯತ್ಯಯಗೊಂಡಿತ್ತು. ಇದರಿಂದ ಜಗತ್ತಿನಾದ್ಯಂತ ಬಳಕೆದಾರರು ತೊಂದರೆ ಎದುರಿಸಿದ್ದರು.  ಹೌದು ಪ್ರಸ್ತುತ ಯುವ ಸಮೂಹ ಸಾಮಾಜಿಕ ಜಾಲತಾಣಗಳನ್ನು ಒಂದು ಕ್ಷಣವೂ ಬಿಟ್ಟಿರಲಾರದಷ್ಟರ ಮಟ್ಟಿಗೆ ಜೋತು ಬಿದ್ದಿದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

Advertisement

ರೀಲ್ಸ್‌ ಮಾಡಿ ಸಾಚಮಾಜಿಕ ಜಾಲತಾಣಗಳಲ್ಲಿ ಹಂಂಚುವುದು, ಬಿಡುವಿನ ಸಂಪೂರ್ಣ ಸಮಯವನ್ನು ಅವುಗಳಲ್ಲಿ ಕಳೆಯುವುದು ಯುವ ಸಮುದಾಯಕ್ಕೆ ಇದೊಂದು ಅಭ್ಯಾಸವೇ ಆಗಿದೆ. ಸಾಕಷ್ಟು ಮಂದಿ ಪ್ರಪಂಚದ ಪರಿಜ್ಞಾನವೇ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿರುವುದು ವಿಪರ್ಯಾಸ. ಇಂತಹ ಯುವ ಸಮೂಹವನ್ನು ಇವುಗಳಿಂದ ಹೊರತರದ ಹೊರತಾಗಿ ಸದೃಢ ಭಾರತದ ನಿರ್ಮಾಣ ಕಷ್ಟವಾಗಿದೆ.

ಎಷ್ಟರಮಟ್ಟಿಗೆ ಯುವಜನತೆ ಈ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದೆ ಅಂದರೆ ಆ ಕ್ಷಣವೇ ಟ್ವಿಟ್ಟರ್‌ ಗೆ ಬಂದು ತಮ್ಮ ಅಳನನ್ನು ತೋರಿಸಿದ್ದರು… ಹೌದು ನಾವುಗಳು ಎಷ್ಟರಮಟ್ಟಿಗೆ ಈ ಸಾಮಾಜಿಕ ಜಾಲತಾಣಗಳಿಗೆ ಮುಳುಗಿದ್ದೇವೆ ಎಂದರೆ ಒಂದೇ ಒಂದು ಕ್ಷಣ ಕೂಡ ಸಾಮಾಜಿಕ ಜಾಲತಾಣಗಳು ಬಿಟ್ಟಿರದ ಪರಿಸ್ಥಿತಿ ಎದುರಾಗಿದೆ.

ಈ ಸಂದರ್ಭದಲ್ಲಿ ನಾನು ಮನೆಯಲ್ಲಿ ಕುಳಿತಿದ್ದೆ. ನನಗೆ ಫೋನಿನ ಮೇಲೆ ಫೋನು ಬರಲು ಪ್ರಾರಂಭಿಸಿತು. ನಿನ್ನ ಫೋನಲ್ಲಿ ಇನ್‌ಸ್ಟಾಗ್ರಾಮ್‌, ಫೇಸ್‌ ಬುಕ್‌ ಬರುತ್ತಿದೆಯಾ…. ಆ ಕ್ಷಣದಲ್ಲೇ ಸುಮಾರು 15 ಫೋನು ಬಂದಿತ್ತು…. ಇದನ್ನೆಲ್ಲ ಗಮನಿಸಿದ ನಾನು ಹೌದು ನಾವು ಎಷ್ಟರಮಟ್ಟಿಗೆ ಈ ಸಾಮಾಜಿಕ ಜಾಲತಾಣಗಳನ್ನು ಬಿಟ್ಟಿರದಷ್ಟು ಅಂಟಿಕೊಂಡಿದ್ದೇವೆ ಎಂಬುದಕ್ಕೆ ಈ ಘಟನೆ ಒಂದು ಮಹತ್ತರವಾದ ಸಾಕ್ಷಿಯಾಗಿತ್ತು.

ಯುವ ಜನತೆಯ ವಿಷಯದಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಇಂದು ಸಾಮಾಜಿಕ ಜಾಲತಾಣಗಳು ಯುವಕರ ಮೇಲೆ ಮತ್ತು ಯುವತಿಯರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿವೆ ಎಂದರೆ ಅರ್ಧ ರಾತ್ರಿಯಲ್ಲಿ ನಿದ್ರೆಯಲ್ಲಿ ಎದ್ದು ತಾವು ಹಾಕಿರುವ ಪೋಸ್ಟ್‌ ಗೆ ಬಂದಿರುವ ಕಾಮೆಂಟ್ಸ್‌ ಮತ್ತು ಲೈಕ್ಸ್‌ ಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯೆ ನೀಡುವ ಸಲುವಾಗಿ ತಮ್ಮ ಇಡೀ ರಾತ್ರಿಯ ನಿದ್ರೆಯನ್ನು ಹಾಳು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

Advertisement

ಇದರಿಂದ ನಿದ್ರೆಯ ಗುಣಮಟ್ಟ ಕಡಿಮೆ ಆಗುವುದರ ಜತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗಿ ಕೆಟ್ಟ ಆರೋಗ್ಯ ಸಮಸ್ಯೆಗಳಾದ ಮಾನಸಿಕ ಖನ್ನತೆ, ಬೊಜ್ಜು ಇತ್ಯಾದಿಗಳು ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅದರಿಂದ ಪೋಷಕರು ಎಚ್ಚರ ವಹಿಸಿ ತಮ್ಮ ಮಕ್ಕಳನ್ನು ಕಾಪಡಿಕೊಳ್ಳಬೇಕು.

-ರಂಜಿತ ಎಚ್‌.ಕೆ.

ಹಾಸನ

Advertisement

Udayavani is now on Telegram. Click here to join our channel and stay updated with the latest news.

Next