Advertisement
ರಾತ್ರಿ 9.30ರ ಸುಮಾರಿಗೆ ಸ್ನೇಹಿತೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಅಲಿನಾಗೆ ವಿವಾಹ ನಿಶ್ಚಯವಾಗಿತ್ತು. ಮದುವೆಯಾಗಲಿರುವ ಹುಡುಗ ಕೂಡ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಅಲಿನಾ ನಗರಕ್ಕೆ ಬಂದು ಕೆಲಸಕ್ಕೆ ಸೇರಿಕೊಂಡು ಸ್ನೇಹಿತೆ ಜತೆ ವಾಸಿಸುತ್ತಿದ್ದಳು. ಅಲಿನಾಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಕೂಡ ಸಿಕ್ಕಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಲಿನಾ ಮದುವೆಯಾಗಲಿರುವ ಹುಡುಗನ ಜತೆ ಆಗಾಗ ಜಗಳವಾಡುತ್ತಿದ್ದಳು ಎಂದು ಆಕೆಯ ಸಹೋದರ ಚೇತನ್ ಲೆಪಾ ಹಾಗೂ ಅಲಿನಾ ಸ್ನೇಹಿತೆ ತಿಳಿಸಿದ್ದಾರೆ.ಅನಾರೋಗ್ಯ ಕಾರಣದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲಿನಾ ಮರಣೋತ್ತರ ಪರೀಕ್ಷೆ ಗುರುವಾರ ನಡೆಯಲಿದೆ. ಬಳಿಕ, ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದರು. Advertisement
ಡಾರ್ಜಿಲಿಂಗ್ ಮೂಲದಯುವತಿ ಆತ್ಮಹತ್ಯೆ
09:01 AM Feb 14, 2019 | |
Advertisement
Udayavani is now on Telegram. Click here to join our channel and stay updated with the latest news.