Advertisement

ಚಿರತೆ ದಾಳಿಯಲ್ಲಿ ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರ ಮಾಡದೆ ಗ್ರಾಮಸ್ಥರಿಂದ ಪ್ರತಿಭಟನೆ

08:46 PM Jan 02, 2021 | Team Udayavani |

ಗಂಗಾವತಿ: ತಾಲೂಕಿನ ವಿರೂಪಾಪೂರಗಡ್ಡಿಯಲ್ಲಿ‌ ಚಿರತೆದಾಳಿಯಲ್ಲಿ ಮೃತಪಟ್ಟ ಯುವಕನ ಶವ ಸಂಸ್ಕಾರ (ದಫನ್) ಮಾಡದೆ ಅರಣ್ಯ ಸಚಿವರು ಬರುವ ತನಕ ಕರಿಯಮ್ಮನಗಡ್ಡಿ ಹಾಗೂ ಸುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ನಡೆದಿದೆ.

Advertisement

ಚಿರತೆ ದಾಳಿಯಲ್ಲಿ ಮೃತಪಟ್ಟ ಯುವಕನ ಶವಸಂಸ್ಕಾರ ಮಾಡಲು ಒಪ್ಪದ ಗ್ರಾಮಸ್ಥರು ಗಂಗಾವತಿ ಮುನಿರಾಬಾದ ರಸ್ತೆಯನ್ನು ಇಡೀ ದಿನ ಬಂದ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಹಾಗೂ ಜಿಲ್ಲಾಡಳಿತ ಪ್ರತಿಭಟನೆ ನಿರತರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಿದರು.

ಗ್ರಾಮಸ್ಥರ ಒತ್ತಾಯಕ್ಕೆ‌ ಮಣಿದ ಸಚಿವ ಆನಂದಸಿಂಗ್ ಪೊಲೀಸರ ಬಿಗಿಬಂದೋಬಸ್ತಿಲ್ಲಿ ಕರಿಯಮ್ಮನಗಡ್ಡಿ ಗೆ ಆಗಮಿಸಿ ಮೃತನ‌ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ಇದನ್ನೂ ಓದಿ:ತಾಯಿ ಮೊಬೈಲ್ ಕಿತ್ತುಕೊಂಡರೆಂದು ಬಾತ್ ರೂಮ್ ನಲ್ಲಿ ಚಿಲಕ ಹಾಕಿ ಕುಳಿತ ಬಾಲಕ

ನಂತರ ಸರಕಾರದಿಂದ 7.5 ಲಕ್ಷ  ಹಾಗೂ  ವೈಯಕ್ತಿಕವಾಗಿ 2.5 ಲಕ್ಷ ಸೇರಿಸಿ ಒಟ್ಟು10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಚಿರತೆ ದಾಳಿಯಿಂದ ಜನರು ಭಯಭೀತರಾಗಿದ್ದಾರೆ ಶೀಘ್ರವಾಗಿ ಸರಕಾರ ಶೂಟೌಟ್ ಮಾಡುವ ಆದೇಶ ಜಾರಿ ಮಾಡಲು ತಜ್ಞರ ಜೊತೆ ಚರ್ಚೆ ಮಾಡಿ ಸೋಮವಾರ ಸಂಜೆ ವೇಳೆಗೆ ಚಿರತೆ ಸೆರೆ ಹಿಡಿಯಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ,ಮಾಜಿ ಸಚಿವ ಶ್ರೀರಂಗದೇವರಾಯಲು,ಮಾಜಿ ಎಂಎಲ್ಸಿ ಎಚ್. ಆರ್.ಶ್ರೀನಾಥ್, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್, ಎಸಿ ಎನ್ ಕನಕರೆಡ್ಡಿ ಸೇರಿದಂತೆ ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next