ಕಾಸರಗೋಡು: ಚಿತ್ತಾರಿ ಚೇಟುಕುಂಡ್ ಕಡಪ್ಪುರದಲ್ಲಿ ನಡೆದ ಒತ್ತೆಕೋಲ ಮಹೋತ್ಸವದಿಂದ ಹಿಂದಿರುಗುತ್ತಿದ್ದ ಪೊಯ್ಯಕ್ಕರ ತಲ್ಲಿಂಗಾಲ್ ನಿವಾಸಿ ಶೈಜು (31) ರೈಲು ಗಾಡಿ ಢಿಕ್ಕಿ ಹೊಡೆದು ಸಾವಿಗೀಡಾದರು. ಚಾಮುಂಡಿಕುನ್ನು ಕ್ಷೇತ್ರದ ಹಿಂಬದಿಯ ರೈಲು ಹಳಿಯಲ್ಲಿ ರೈಲು ಗಾಡಿ ಢಿಕ್ಕಿ ಹೊಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
—————-
ರೈಲು ಢಿಕ್ಕಿ ಹೊಡೆದು ಯುವಕನ ಸಾವು
ಕಾಸರಗೋಡು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 32,77,560 ರೂ. ಮೌಲ್ಯದ 572 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ನಿವಾಸಿ ಶಬಿನ್ ಅಲಿಯಿಲ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈತ ಗೋ-ಫಾಸ್ಟ್ ವಿಮಾನದಲ್ಲಿ ಅಬುಧಾಬಿಯಿಂದ ಬಂದಿಳಿದಿದ್ದನು.
————————————————————————————————————–
ಚೆಕ್‌ಲೀಫ್, ಎಟಿಎಂ ಕಸಿದ ಪ್ರಕರಣ : ಇಬ್ಬರ ವಿರುದ್ಧ ಕೇಸು ದಾಖಲು
ಕಾಸರಗೋಡು: ಹೊಟೇಲ್‌ನಲ್ಲಿ ತಂಗಿದ್ದ ಎರ್ನಾಕುಳಂ ನೆಟ್ಟೂರು ಚೆರಿಯಪರಂಬಿಲ್ ನಿವಾಸಿ ಮುಹಮ್ಮದ್ ಶರೀಫ್ (51) ಅವರನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಚೆಕ್‌ಲೀಫ್ ಮತ್ತು ಎಟಿಎಂ ಕಾರ್ಡ್ ಮೊದಲಾದವುಗಳನ್ನು ಕಸಿದೆಳೆದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಉಪ್ಪಳ ಬಾಯಾರುಪದವಿನ ಜಾವಾದ್ ಹಾಸಿಫ್ ಸಹಿತ ಇಬ್ಬರ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. 2022ರ ಡಿ. 31ರಂದು ಕಾರಿನಲ್ಲಿ ಜೋಡುಕಲ್ಲಿಗೆ ಕೊಂಡೊಯ್ದು ಹಲ್ಲೆ ಮಾಡಿ ಬೆದರಿಸಿ ತನ್ನ ಬ್ಯಾಂಕ್ ಚೆಕ್‌ಲೀಫ್‌ಗಳು, ಎಟಿಎಂ ಕಾರ್ಡ್‌ಗಳು, ಮೊಬೈಲ್ ಫೋನ್, ಸ್ಟಾಂಪ್ ಪೇಪರ್‌ಗಳನ್ನು ಕಸಿದುಕೊಂಡು ಅದನ್ನು ಬಳಸಿ ಹಣ ಪಡೆದುಕೊಂಡಿದ್ದಾಗಿ ದೂರು ನೀಡಲಾಗಿತ್ತು.
————————————————————————————————————–
ರಜಾ ಅವಧಿ ಕಡಿತಗೊಳಿಸಿ ಕರ್ತವ್ಯಕ್ಕೆ ಹಾಜರಾದ ಮಾಜಿ ಪ್ರಾಂಶುಪಾಲೆ
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನ ಈ ಹಿಂದಿನ ಪ್ರಾಂಶುಪಾಲೆ ಡಾ| ಎಂ. ರಮಾ ತಮ್ಮ ದೀರ್ಘ ಕಾಲದ ರಜಾ ಅವಧಿ ಕಡಿತಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಕಾಲೇಜಿಗೆ ಪ್ರವೇಶಿಸುತ್ತಿದ್ದಂತೆಯೇ ಎಸ್‌ಎಫ್‌ಐ ವಿದ್ಯಾರ್ಥಿಗಳು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಮತ್ತೆ ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಕಲೆಕ್ಟರೇಟ್‌ನಲ್ಲಿ ನಡೆದ ಮಹಿಳಾ ಆಯೋಗದ ಅದಾಲತ್‌ನಲ್ಲಿ ಎಂ. ರಮಾ ಹಾಜರಾಗಬೇಕಿತ್ತು. ಆದರೆ ಅವರು ಗೈರುಹಾಜರಾಗಿದ್ದರು. ವಿದ್ಯಾರ್ಥಿಗಳು ತನ್ನನ್ನು ದಿಗ್ಬಂಧನಗೊಳಿಸುತ್ತಿರುವುದರಿಂದಾಗಿ ಅದಾಲತ್‌ಗೆ ಹಾಜರಾಗಲು ತನಗೆ ಸಾಧ್ಯವಾಗಲಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನ ಕುಡಿಯುವ ನೀರಿನ ಸಮಸ್ಯೆ ಹೆಸರಿನಲ್ಲಿ ವಿದ್ಯಾರ್ಥಿಗಳು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಆ ದೂರಿನಂತೆ ಅದಾಲತ್‌ನಲ್ಲಿ ಹಾಜರಾಗುವಂತೆ ಮಹಿಳಾ ಆಯೋಗ ಡಾ| ಎಂ.ರಮಾ ಅವರಿಗೆ ನಿರ್ದೇಶ ನೀಡಿತ್ತು.