Advertisement

Tulunadu flag;ವಿಶ್ವದ ಅತೀ ಎತ್ತರದ ಶಿಖರದಲ್ಲಿ ತುಳುನಾಡ ಧ್ವಜ ಹಾರಿಸಿದ ಉಡುಪಿಯ ಯುವಕ!

12:54 AM Aug 08, 2023 | Team Udayavani |

ಉಡುಪಿ: ಸಾಫ್ಟ್ ವೇರ್‌ ಕೆಲಸ ಬಿಟ್ಟು ಸುಮಾರು 18 ಸಾವಿರಕ್ಕೂ ಅಧಿಕ ಕಿ.ಮೀ. ಪ್ರಯಾಣವನ್ನು ಬೈಕಿನಲ್ಲಿಯೇ ಏಕಾಂಗಿಯಾಗಿ ಮುಗಿಸಿ ತುಳುನಾಡಿನ ಧ್ವಜವನ್ನು ವಿಶ್ವದ ಅತೀ ಎತ್ತರದ ಲಡಾಖ್‌ನ ಉಮ್ಲಿಂಗ್‌ ಲಾ ಮತ್ತು ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ನ ಮೇಲೆ ಉಡುಪಿಯ ಬ್ರಹ್ಮಗಿರಿಯ ಯುವಕ ಸಿದ್ವಿನ್‌ ಶೆಟ್ಟಿ (28)ಹಾರಿಸಿದ್ದಾರೆ.

Advertisement

ಟ್ರೆಕ್ಕಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಇವರು 2023ರ ಮೇ 6ರಂದು ಉಡುಪಿಯಿಂದ ತನ್ನ ಹಿಮಾಲಯನ್‌ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿ ಭಾರತದ 21 ರಾಜ್ಯಗಳು, 5 ಕೇಂದ್ರಾ ಡಳಿತ ಪ್ರದೇಶಗಳನ್ನು ಮತ್ತು ನೇಪಾಲ ಮತ್ತು ಭೂತಾನ್‌ ದೇಶಗಳನ್ನು ಸುತ್ತಿ ಜು. 19ರಂದು ಉಡುಪಿಗೆ ಮರಳಿದ್ದಾರೆ. ಇದರೊಂ ದಿಗೆ ವಿಶ್ವದ ಅತೀ ಎತ್ತರದ ಪ್ರದೇಶ

ವಾದ ಉಮ್ಲಿಂಗ್‌ ಲಾ (19,024 ಅಡಿ), ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ (17,598 ಅಡಿ ಎತ್ತರ) ಮತ್ತು ವಿಶ್ವದ ಅತೀ ಎತ್ತರದ ಶಿವ ದೇವಾಲಯ ತುಂಗನಾಥ್‌ ಅನ್ನು ಕೂಡ ಸ್ಪರ್ಶಿಸಿ ಬಂದಿದ್ದಾರೆ.

ಉಡುಪಿಯ ಸುರೇಶ್‌ ಕೃಷ್ಣ ಶೆಟ್ಟಿ ಮತ್ತು ಸುಜಯಾ ಎಸ್‌. ಶೆಟ್ಟಿ ಅವರ ಪುತ್ರ. ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಇಡೀ ದೇಶವನ್ನು ಸುತ್ತಿ ಅಲ್ಲಿನ ಶಿವ ದೇವಾಲಯಗಳನ್ನು ಸಂದರ್ಶಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ತುಳುನಾಡಿನ ಧ್ವಜವನ್ನು ವಿಶ್ವದ ಎತ್ತರದ ಪ್ರದೇಶ
ದಲ್ಲಿ ಇದುವರೆಗೆ ಉಡುಪಿಯ ಯಾವುದೇ ಚಾರಣಿಗರು ಹಾರಿಸಿಲ್ಲ ಎನ್ನುತ್ತಾರೆ ಅವರು.

ನನ್ನ ಈ ಪ್ರಯಾಣದ ಅವಧಿಯಲ್ಲಿ 50 ಡಿಗ್ರಿಗಳಿಂದ -16 ಡಿಗ್ರಿ ವರೆಗಿನ ತಾಪಮಾನವನ್ನು ತಡೆದುಕೊಂಡಿದ್ದೇನೆ. 100ಕ್ಕೂ ಅಧಿಕ ದೇವಸ್ಥಾನಗಳು, ಗುರುದ್ವಾರ, ಚರ್ಚ್‌ ಮತ್ತು ಮಸೀದಿಗಳ ವಾಸ್ತು ಶಿಲ್ಪವನ್ನು ವೀಕ್ಷಿಸುವ ಅವಕಾಶ ದೊರಕಿತು. ಈ ವೇಳೆ ಬಹುತೇಕ ಎಲ್ಲ ಧರ್ಮದ ಜನರೊಂದಿಗೆ ಬೆರೆಯುವ ಅವರೊಂದಿಗೆ ಸಂವಾದ ಮಾಡುವುದರೊಂದಿಗೆ ಅವರ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು. ಮೂರು ದೇಶಗಳ ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಕೂಡ ಭೇಟಿಯಾಗಿದ್ದು ಮತ್ತೊಂದು ವಿಶೇಷ.
– ಸಿದ್ವಿನ್‌ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next