ಪಣಜಿ: ಪ್ರವಾಸಕ್ಕೆಂದು ಕರ್ನಾಟಕದಿಂದ ಗೋವಾಕ್ಕೆ ತೆರಳಿದ್ದ ಯುವಕನೊಬ್ಬ ಪಣಜಿಯ ಹೋಟೆಲ್ ವೊಂದರಲ್ಲಿ ಟ್ರ್ಯಾಕ್ ಪ್ಯಾಂಟ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಪೊಲೀಸರ ಪ್ರಕಾರ, ಮೂಲತಃ ತುಮಕೂರು ಮೂಲದ ಸಾಹಿಲ್ ಖಾನ್ (25) ಮೇ 26 ರಂದು ಗೋವಾಕ್ಕೆ ಬಂದಿದ್ದರು ಎನ್ನಲಾಗಿದೆ.
ಪಣಜಿಯ ಮಳಾದ ಹೊಟೇಲ್‍ನಲ್ಲಿ ಮೇ 30ರವರೆಗೆ ಕೊಠಡಿ ಕಾಯ್ದಿರಿಸಿದ್ದರು. ಗೆಳೆಯರಿಂದ ದೊಡ್ಡ ಮೊತ್ತದ ಹಣ ತಂದಿದ್ದ. ಅಲ್ಲಿಂದ ಸಂಜೆ ಪಣಜಿಯ ಕ್ಯಾಸಿನೊಗೆ ಜೂಜಾಡಲು ಹೋಗಿ ತಡರಾತ್ರಿ ಹೋಟೆಲ್‍ಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ. ಆದರೆ ಮೇ 30 ರಂದು ಬೆಳಗ್ಗೆ 11 ಗಂಟೆಯಾದರೂ ಎದ್ದೇಳದ ಕಾರಣ ಹೋಟೆಲ್ ಉದ್ಯೋಗಿ ಅನುಮಾನಗೊಂಡು ಹೋಟೆಲ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದಾರೆ.
ಘಟನೆ ಕುರಿತು ಪಣಜಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸಾಹಿಲ್ ಖಾನ್ ಕೊಠಡಿಯ ಬಾಗಿಲು ತೆರೆದಿರುವುದು ಕಂಡು ಬಂತು. ಪೊಲೀಸರು ಕೊಠಡಿಯ ಬಾಗಿಲು ತೆರೆದಾಗ ಸಾಹಿಲ್ ಖಾನ್ ಫ್ಯಾನ್‍ಗೆ ನೇಣು ಬಿಗಿದು ಸಾವನ್ನಪ್ಪಿರುವುದು ಕಂಡು ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯಾವುದೇ ಪತ್ರವನ್ನು ಇಟ್ಟಿರರಲಿಲ್ಲ, ಆತ್ಮಹತ್ಯೆಯ ಹಿಂದಿನ ಕಾರಣವನ್ನು ಬರೆದಿರಲಿಲ್ಲ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಕ್ಯಾಸಿನೊದಲ್ಲಿ ದೊಡ್ಡ ಮೊತ್ತದ ಜೂಜಾಟ ನಡೆಸಿದ್ದ. ಹೆಚ್ಚಿನ ಹಣವನ್ನು ಸಾಲ ಮಾಡಿ ಅದೃಷ್ಟ ಪರೀಕ್ಷೆಗೆಂದು ಗೋವಾಕ್ಕೆ ಬಂದಿದ್ದ ಆದರೆ, ಹಣವನ್ನೆಲ್ಲ ಕಳೆದುಕೊಂಡು ಸಾಲಗಾರರನ್ನು ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.