Advertisement

ಪೊಲೀಸರ ಮೊರೆ ಹೋದ ಯುವ ಜೋಡಿ

12:49 PM Feb 17, 2018 | Team Udayavani |

ನಂಜನಗೂಡು: ಪರಸ್ಪರ ಪ್ರೀತಿಸಿ ದೇವಾಲಯದಲ್ಲಿ ಮದುವೆಯಾದ ಯುವ ಜೋಡಿಗಳು ರಕ್ಷಣೆಗಾಗಿ ಪೊಲೀಸರ ಮೋರೆ ಹೋದ ಘಟನೆಗೆ ನಂಜನಗೂಡು ವೃತ್ತ ನಿರೀಕ್ಷಕರ ಕಾಯಾಲಯದಲ್ಲಿ ನಡೆದಿದೆ. ತಾಲೂಕಿನ ಕುರಿಹುಂಡಿಯ ಚೈತ್ರಾ ಹಾಗೂ ಅದೇ ಗ್ರಾಮದ ಕೃಷ್ಣಮೂರ್ತಿ ಶುಕ್ರವಾರ ಪಟ್ಟಣದ ಪರುಶುರಾಮ ದೇವಾಯದಲ್ಲಿ ಮದುವೆಯಾದ ಯುವ ಜೋಡಿ.

Advertisement

ತಾವಿಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ದೇವಾಲಯದಲ್ಲಿ ಮದುವೆಯಾಗಿದ್ದೇವೆ, ನಮ್ಮ ಪ್ರೀತಿಗೆ ಮನೆಯವರ ವಿರೋಧವಿರುವುದರಿಂದ ನಮ್ಮಿಬ್ಬರಿಗೆ ರಕ್ಷಣೆ ನೀಡಿ ಎಂದ ಯುವತಿ ಚೈತ್ರಾ  ಪೊಲೀಸರಿಗೆ ತಿಳಿಸಿದ್ದಾರೆ.

ಕಂದೇಗಾಲದ ವರನೊಂದಿಗೆ ಬಲವಂತವಾಗಿ ತನಗೆ ನಿಶ್ಚಿತಾರ್ಥ ಇಟ್ಟುಕೊಂಡಿದ್ದು ಅದನ್ನು ವಿರೋಧಿಸಿದ ನಾನು ಮನೆಯಿಂದ ಹೊರಬಂದು ಕೃಷ್ಣಮೂರ್ತಿಯೊಂದಿಗೆ ಮದುವೆಯಾಗಿರುವುದಾಗಿ ಹೇಳಿದ ಚೈತ್ರಾ ತಮ್ಮ ಮುಂದಿನ ಜೀವನಕ್ಕೆ ನೀವೆ ದಾರಿ ತೋರಿಸಬೇಕೆಂದು ಸಿಪಿಐ ಗೋಪಾಲಕೃಷ್ಣರಿಗೆ ಮನವಿ ಮಾಡಿದ್ದಾರೆ.

ಒಂದೇ ಗ್ರಾಮ ಹಾಗೂ ಜಾತಿಯವರಾದ ಇಬ್ಬರ ಕುಟುಂಬದ ಹಿರಿಯರನ್ನು ಕರೆಸಿ ಮಾತಾನಾಡಿ ಇಬ್ಬರ ಪ್ರೀತಿ  ಪ್ರೇಮದ ವೈವಾಹಿಕ ಜೀವನದ ಕನಸನ್ನು ನನಸು ಮಾಡಲು ಪ್ರಯತ್ನಿಸುವುದಾಗಿ ಸಿಪಿಐ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next