Advertisement

ಪಾನಮತ್ತ ಮಹಿಳೆ ಜತೆ‌ ಮಿಲನವೂ ಅತ್ಯಾಚಾರವೇ!

03:45 AM Feb 21, 2017 | |

ಮುಂಬೈ: ಪಾನಮತ್ತ ಮಹಿಳೆ ಲೈಂಗಿಕ ಕ್ರಿಯೆ ನಡೆಸಲು ಸಮ್ಮತಿ ಸೂಚಿಸಿದರೂ, ಅದನ್ನು ಸಮ್ಮತಿ ಎಂದು ಭಾವಿಸಬಾರದು. ಏಕೆಂದರೆ, ಆ ಸಮ್ಮತಿಯೂ ಅಮಾನ್ಯವೆಂದು ಪರಿಗಣಿಸಬೇಕಾಗುತ್ತದೆ ಎಂಬ ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಪಾನಮತ್ತ ಮಹಿಳೆ ಮೈ ಮರೆತ ಸ್ಥಿತಿಯಲ್ಲಿದ್ದು, ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಅಸಮರ್ಥಳಾಗಿರುತ್ತಾಳೆ. ಹಾಗಾಗಿ, ಆ ಸಮಯದಲ್ಲಿ ಆಕೆ ಸಮ್ಮತಿಸಿದಳೆಂದು ಭಾವಿಸಿ, ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಪುಣೆಯಲ್ಲಿ 24 ವರ್ಷದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ  ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮೃದುಲಾ ಭಟ್ಕರ್‌ ಅವರಿದ್ದ ಪೀಠ ಮೇಲಿನ ಆದೇಶ ನೀಡಿದೆ.

ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಮಹಿಳೆ ಪ್ರಜ್ಞಾಪೂರ್ವಕವಾಗಿ ಒಪ್ಪಿಗೆ ಕೊಡಬೇಕು ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗದೇ ಸಮ್ಮತಿ ಸೂಚಿಸುವಂತಿರಬೇಕು. ಒಂದು ವೇಳೆ ಮೌನವಾಗಿದ್ದರೆ ಅಥವಾ ಅನಿಶ್ಚಿತತೆಗೊಳಗಾಗಿದ್ದರೆ ಅದು ಲೈಂಗಿಕ ಕ್ರಿಯೆಗೆ ಒಪ್ಪಿಗೆ ಸೂಚಿಸಿದಂತೆ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲ, “ಮಹಿಳೆ ಪಾನಮತ್ತಳಾಗಿದ್ದಳು, ಲೈಂಗಿಕ ಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದಳು’ ಎಂದು ವಾದ ಮಂಡಿಸಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next