Advertisement

ಕರೆಂಟ್‌ ಕಳ್ಳರಿಗೆ ಈ ಅಧಿಕಾರಿ ಶಾಕ್‌

08:05 AM Sep 13, 2017 | Team Udayavani |

ಲಕ್ನೊ: ದೇಶದಲ್ಲಿ ವಿದ್ಯುತ್‌ ಕಳವಿನಿಂದ ಉಂಟಾಗುತ್ತಿರುವ ನಷ್ಟವೆಷ್ಟು? ಸುಮಾರು 10 ಸಾವಿರ ಕೋಟಿ ರೂ.? ಉತ್ತರ ಪ್ರದೇಶದ ಮಹಿಳಾ ಐಎಎಸ್‌ ಅಧಿಕಾರಿ ರಿತು ಮಾಹೇಶ್ವರಿ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ವಿದ್ಯುತ್‌ ಕಳವಿನಿಂದ ಉಂಟಾಗುವ ನಷ್ಟ 60 ಸಾವಿರ ಕೋಟಿ ರೂ. ಅದನ್ನು ತಡೆಯಲು ಅವರು ಈಗ ಹೋರಾಟವನ್ನೇ ಆರಂಭಿಸಿದ್ದಾರೆ. ಕಾನ್ಪುರ ವಿದ್ಯುತ್‌ ಸರಬರಾಜು ಕಂಪನಿಯ ಮುಖ್ಯಾಧಿಕಾರಿಯಾಗಿ 2011ರಲ್ಲಿ ನೇಮಕಗೊಂಡ ಅವರು ಗ್ರಾಹಕರ ಮತ್ತು ಕೈಗಾರಿಕಾ ಘಟಕಗಳಿಗೆ ಮೀಟರ್‌ ಅಳವಡಿಸಿದ್ದರು. ವಿದ್ಯುತ್‌ ಸೋರಿಕೆ ಪತ್ತೆ ಹಚ್ಚುತ್ತಿದ್ದಂತೆ ಅವರನ್ನು ಅಲ್ಲಿಂದ ವರ್ಗಾಯಿಸಲಾಯಿತು. ಈ ಸಂದರ್ಭದಲ್ಲಿ ಅವರು ಉತ್ತರ ಪ್ರದೇಶದಲ್ಲಿ ಮನೆ ಮಾತಾಗಿದ್ದರು.

Advertisement

ಆದರೂ ಅವರು ಹೋರಾಟ ಕೈಬಿಡಲಿಲ್ಲ. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉದಯ್‌ ಯೋಜನೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದಾರೆ. ವಿವಿಧ ರಾಜ್ಯಗಳ ವಿದ್ಯುತ್‌ ಸುಧಾರಣಾ ಕಂಪನಿಗಳು ಹೊಂದುತ್ತಿರುವ ನಷ್ಟ ಮತ್ತು ಅವುಗಳಿಂದ ಪಾರು ಮಾಡುವ ಬಗ್ಗೆ ಅವರು ಈಗ ಪ್ರಧಾನ ಪಾತ್ರ ವಹಿಸಲಿದ್ದಾರೆ. ಈ ಯೋಜನೆ ಜಾರಿಯಾದ ಬಳಿಕ ಶೇ.22ರಷ್ಟು ವಿದ್ಯುತ್‌ ಕಳವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ 1,60,000 ಇದ್ದ ಮೀಟರ್‌ಗಳನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದಿದ್ದಾರೆ. ಇಂಥ ಕಠಿಣ ಕ್ರಮದಿಂದ ಹಾಲಿ ವರ್ಷ ವಿದ್ಯುತ್‌ ಕಳವಿನ ಪ್ರಮಾಣದಲ್ಲಿ ತಗ್ಗಲಿದೆ ಎಂಬ ವಿಶ್ವಾಸ ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next