ಹುಣಸೂರು: ಈಶಾನ್ಯ ಆಪ್ರೀಕಾದ ಸೂಡಾನ್ ದೇಶಕ್ಕೆ ವ್ಯಾಪಾರಕ್ಕಾಗಿ ತೆರಳಿದ ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮದ ಅಲೆಮಾರಿ ಜನಾಂಗದ (ಹಕ್ಕಿಪಿಕ್ಕಿ) ನಂದಿನಿ ಸಾವನ್ನಪ್ಪಿದ್ದು. ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.
ನಂದಿನಿಯವರ ಸಾವಿನ ವಿಷಯವನ್ನು ಅಲ್ಲಿರುವ ಇತರೆ ಹಕ್ಕಿಪಿಕ್ಕಿ ಸಮುದಾಯದವರು ದೂರವಾಣಿ ಮೂಲಕ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಪಕ್ಷಿರಾಜಪುರದಲ್ಲಿ ಮೃತ ನಂದಿಯವರ ಪತಿ. ನಾಲ್ಕು ಹೆಣ್ಣು ಮಕ್ಕಳು. ಒಬ್ಬ ಗಂಡು ಮಗನೊಂದಿಗೆ (ಒಬ್ಬ ಮಗಳು ಅಂಗವಿಕಲಳಾಗಿದ್ದು) ವಾಸವಾಗಿದ್ದರು.
ಇದೀಗ ತಾಯಿಯ ಮೃತ ದೇಹವನ್ನು ಸ್ವದೇಶಕ್ಕೆ ತರಲು ನೆರವಾಗುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಗ್ರಾಮದ ನಂದಿನಿ ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರು ಮಾಜಿ ಶಾಸಕ ಎಚ್.ಪಿ. ಮಂಜುನಾಥರಿಗೆ ಮಾಹಿತಿ ನೀಡಿ ಕೀನ್ಯಾ ದೇಶದಿಂದ ನಂದಿನಿಯವರ ಶವ ತರಲು ನೆರವಾಗಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿ. ಮಂಜುನಾಥ ಅವರು ಮುಖ್ಯಮಂತ್ರಿಗಳ ಕಚೇರಿಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ರವರ ಮೂಲಕ ಸೂಡಾನ್ ದೇಶದಲ್ಲಿರುವ ಭಾರತದ ರಾಯಬಾರಿ ಕಚೇರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನಂದಿನಿಯವರ ಶವವನ್ನು ಸ್ವದೇಶಕ್ಕೆ ತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದ್ದು. ಏ17 ರಂದು ಹುಣಸೂರಿಗೆಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಎಸ್.ಸಿ.ಎಸ್.ಟಿ.ಜಾಗೃತಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಉದಯವಾಣಿ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ