Advertisement
ಹೊಸ ದೇಗುಲದ ವಿಶೇಷ ಏನು?ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆ ಟೌನ್‌ಶಿಪ್‌ನಲ್ಲಿ ಅಕ್ಷರಧಾಮ ದೇಗುಲ ನಿರ್ಮಾಣವಾಗಿದೆ. ಬಿಎಪಿಎಸ್ ಸ್ವಾಮಿ ನಾರಾಯಣ ಅಕ್ಷರಧಾಮ ದೇಗುಲ ಅದರ ನೇತೃತ್ವ ವಹಿಸಿದೆ. 255 ಅಡಿ x 345 ಅಡಿ x 191 ಸುತ್ತಳತೆ ಹೊಂದಿದೆ. ಭಾರತ ಹೊಂದಿರುವ ಸಾಂಸ್ಕೃತಿಕ ಪರಂಪರೆಗಳನ್ನು ಆಧರಿಸಿ ಸುಂದರ ಕೆತ್ತನೆಯ ಶಿಲ್ಪಗಳು ಇದರಲ್ಲಿವೆ. 10 ಸಾವಿರ ವಿವಿಧ ನೃತ್ಯ ಭಂಗಿಗಳು ಇರುವ ವಿಗ್ರಹಗಳನ್ನು ಕೆತ್ತಲಾಗಿದೆ.
12 ವರ್ಷಗಳು- ಕಾಮಗಾರಿ ಪೂರ್ತಿಗೊಳ್ಳಲು ಬೇಕಾದ ಅವಧಿ – 2011ರಿಂದ 2023
183 ಎಕರೆ- ದೇಗುಲ ಹೊಂದಿರುವ ಜಮೀನು
ಗರ್ಭ ಗುಡಿ, 12 ದೇವರ ಗುಡಿಗಳು, 9 ಗೋಪುರಗಳು, 9 ಪಿರಮಿಡ್ ಆಕಾರದ ಗೋಪುರಗಳು ಇದರಲ್ಲಿವೆ.
1,000 ವರ್ಷ- ಇಷ್ಟು ವರ್ಷ ಬಾಳಿಕೆ ಬರುವಂತೆ ನಿರ್ಮಾಣ ದೂರವೆಷ್ಟು?
90 ಕಿ.ಮೀ.- ನ್ಯೂಯಾರ್ಕ್‌ನ ಟೈಮ್ಸ್ ಚೌಕದಿಂದ
289 ಕಿ.ಮೀ.- ವಾಷಿಗ್ಟನ್ ಡಿ.ಸಿ.ಯ ಉತ್ತರಕ್ಕೆ
Related Articles
ಕಾಂಬೋಡಿಯಾದ ಆ್ಯಂಗ್‌ಕೋರ್ ವಾಟ್ ಜಗತ್ತಿನ ಅತ್ಯಂತ ದೊಡ್ಡ ದೇಗುಲ ಎಂಬ ಹೆಗ್ಗಳಿಕೆಗೆ ಪಡೆದಿದೆ. 500 ಎಕರೆ ಪ್ರದೇಶದಲ್ಲಿ ಅದು ವ್ಯಾಪಿಸಿದೆ. ಜತೆಗೆ ಯುನೆಸ್ಕೋದ ವಿಶ್ವ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ದಾಖಲಾಗಿದೆ. 2005ರ ನವೆಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ಲೋಕಾರ್ಪಣೆಗೊಂಡಿರುವ ಅಕ್ಷರಧಾಮ ದೇಗುಲ 100 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.
Advertisement
ಯಾವಾಗ ಉದ್ಘಾಟನೆ?ಅ. 8 ಭಾರತದಿಂದಲೂ ಕಲ್ಲುಗಳ ಪೂರೈಕೆ
ಅಕ್ಷರಧಾಮ ದೇಗುಲ ನಿರ್ಮಾಣಕ್ಕೆ ನಾಲ್ಕು ಬಗೆಯ ಕಲ್ಲುಗಳನ್ನು ಬಳಕೆ ಮಾಡಲಾಗಿದೆ. ಸುಣ್ಣದ ಕಲ್ಲು (ಬಲ್ಗೇರಿಯಾ ಮತ್ತು ಟರ್ಕಿ), ಗುಲಾಬಿ ಬಣ್ಣದ ಕಲ್ಲು, ಮಾರ್ಬಲ್ (ಗ್ರೀಸ್), ಗ್ರಾನೈಟ್ (ಭಾರತ ಮತ್ತು ಚೀನ), ಸ್ಯಾಂಡ್‌ಸ್ಟೋನ್ (ಭಾರತ) ಗಳನ್ನು ತರಿಸಿಕೊಂಡು ನಿರ್ಮಾಣ.
2 ಮಿಲಿಯ ಕ್ಯೂಬಿಕ್ ಫೀಟ್- ಬಳಕೆ ಮಾಡಲಾದ ಕಲ್ಲುಗಳು ದೇಶದಿಂದಲೂ ಪವಿತ್ರ ಜಲ
ಭಾರತದ ಪವಿತ್ರ ನದಿಗಳ ಸಹಿತ ಜಗತ್ತಿನ 300 ನದಿ ಮೂಲಗಳಿಂದ ನೀರು ಸಂಗ್ರಹಿಸಿ ಅಲ್ಲಿಗೆ ಕೊಂಡೊಯ್ಯಲಾಗಿದೆ ಸ್ವಯಂಸೇವಕರು ಯಾರೆಲ್ಲ?
ವಿದ್ಯಾರ್ಥಿಗಳು, ವಿವಿಧ ಕಂಪೆನಿಗಳ ಸಿಇಒಗಳು, ವೈದ್ಯರು, ಎಂಜಿನಿಯರ್‌ಗಳು, ಕಟ್ಟಡ ವಿನ್ಯಾಸಕಾರರು ದೇಗುಲ ನಿರ್ಮಾಣದಲ್ಲಿ ಭಾಗಿಯಾಗಿದ್ದರು. ಕೆಲವರು ತಮ್ಮ ಉದ್ಯೋಗಕ್ಕೆ ರಜೆ ಹಾಕಿ ದುಡಿದಿದ್ದಾರೆ ಎಂದು ಬಿಎಪಿಎಸ್ ಅಧಿಕಾರಿಗಳು ಹೇಳಿದ್ದಾರೆ. ಹಲವರು ದೇಗುಲ ನಿರ್ಮಾಣಕ್ಕಾಗಿ ಸ್ಥಳದಲ್ಲಿಯೇ ಬಾಡಿಗೆಗೆ ಮನೆಗಳನ್ನು ಪಡೆದು ವಾಸ್ತವ್ಯ ಹೂಡಿದ್ದರು.