Advertisement

ಮೀನು ಮತ್ತು ಆಕ್ಟೋಪಸ್ ನಂತೆ ಕಂಡುಬರುವ ಪ್ರಾಣಿಯ ವಿಡಿಯೋ ವೈರಲ್: ನಿಜಕ್ಕೂ ಇದೇನು ?

09:55 AM Feb 03, 2020 | Mithun PG |

ನ್ಯೂಯಾರ್ಕ್: ಟಿಕ್ ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ ಪ್ರಾಣಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು  ಅದು ಮೀನೋ ಅಥವಾ ಅಕ್ಟೋಪಸ್ಸೋ ಎಂಬುದರ ಕುರಿತು ಪರವಿರೋಧ ಹೇಳಿಕೆಗಳು ಬರುತ್ತಿವೆ.

Advertisement

ಹೌದು, ನಟಾಲಿಯಾ ವೊರೊಬಿಕ್ ಎನ್ನುವವರು ಟಿಕ್ ಟಾಕ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು ಈಗಾಗಲೇ 16. 2ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಪ್ರಾಣಿಯು ಮೇಲ್ನೋಟಕ್ಕೆ ಮೀನಿನಂತೆ ಕಾಣುತ್ತದೆ. ಆದರೇ ಬೃಹದಾಕಾರವಾದ ತಲೆ ಹೊಂದಿರುವ ಕಾರಣ ಆಕ್ಟೋಪಸ್ ನಂತಯೇ ಗೃಹಣಾಂಗಗಳು ಇವೆ. ಇದನ್ನು ಬ್ರೂಕ್ಲಿನ್ ನ ಕೋನಿ ದ್ವೀಪದಲ್ಲಿ ಹಿಡಿಯಲಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಆಕ್ಟೋಪಸ್ ಮತ್ತು ಮೀನು ಎರಡರ ಹೊಲಿಕೆ ಇರುವ ಈ ಪ್ರಾಣಿಯ ವಿಡಿಯೋ ಟಿಕ್ ಟಾಕ್ ನಲ್ಲಿ ಲಕ್ಷಾಂತರ ಶೇರ್ ಆಗಿವೆ. ಇದೊಂದು ವಿಶೇಷ ಪ್ರಾಣಿ ಎಂದು ಅನೇಕರು ಕಮೆಂಟ್ ಮಾಡಿದ್ದರೆ, ಕೆಲವರು ಇದು ಡೆಮೋಡ್ರಾಗನ್ ಇರಬಹುದು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ಮತ್ತೂ ಕೆಲವರು ಇದನ್ನು ಕ್ಲಿಯರ್ ನೋಸ್ ಸ್ಕೇಟ್ ಎಂದು ಕರೆದಿದ್ದು . ಇವು ಸಮುದ್ರಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ ಎಂದು ತಿಳಿಸಿದ್ದಾರೆ.

 

@natalie1526n#whatisthat #wtf #fyp #animal #ocean #nyc #atlanticocean #coneyisland #fishing♬ Apocalyptic ASMR – kiyohshi

Advertisement
Advertisement

Udayavani is now on Telegram. Click here to join our channel and stay updated with the latest news.

Next