Advertisement

ಹಿಮಮಳೆಗೆ ನಡುಗಿದ ಕಣಿವೆ

01:37 AM Jan 07, 2021 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮ ಮಳೆ ಸುರಿಯುತ್ತಿದ್ದು, ಪೂಂಛ್, ರಾಂಬನ್‌, ದೋಡಾ, ಕಿಸ್ತ್ವಾರ್‌, ಅನಂತ್‌ನಾಗ್‌, ಬಾರಾಮುಲ್ಲಾ ಸೇರಿದಂತೆ ಹಲವು ಪ್ರದೇಶಗಳಿಗೆ ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ, ಮುಘಲ್‌ ರಸ್ತೆ ಮುಚ್ಚಿರುವ ಕಾರಣ, ದೇಶದ ಇತರ ಪ್ರದೇಶಗಳಿಂದ ಕಾಶ್ಮೀರಕ್ಕಿದ್ದ ಸಂಪರ್ಕವೂ ಸ್ಥಗಿತಗೊಂಡಿದೆ.

Advertisement

ಹಿಮ ವರ್ಷದಿಂದಾಗಿ ಎನ್‌ಸಿ ನಾಯಕ ಮೊಹಮ್ಮದ್‌ ಸಯೀದ್‌ ಅಖೂನ್‌ ಅವರ ಮನೆಯ ಗಾರ್ಡ್‌ ರೂಂ ಕುಸಿದು ಬಿದ್ದ ಪರಿಣಾಮ, ಬುಧವಾರ ಸಿಆರ್‌ಪಿಎಫ್ ಅಧಿಕಾರಿ, ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಸಿ. ಮುರ್ಮುರ್‌ ಮೃತಪಟ್ಟಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ 74 ವರ್ಷದ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಎಲ್ಲೆಡೆ ಹಿಮ ಮಳೆ ಬೀಳುತ್ತಿದ್ದು, ಮನೆಗಳು, ಕಾರುಗಳ ಮೇಲೆ ಬಿದ್ದಿರುವ ಮಂಜುಗಡ್ಡೆಗಳನ್ನು ತೆಗೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next