Advertisement

Vijayapura: ಜಮೀನಿನಲ್ಲಿ ಆಡಲು ಹೋಗಿ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು

07:29 PM Apr 03, 2024 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಎರಡು ವರ್ಷದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ವರದಿಯಾಗಿದೆ.

Advertisement

ಇಂಡಿ ತಾಲೂಕಿನ‌ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಭಾವಿಗೆ ಬಿದ್ದಿರುವ ಮಗುವನ್ನು ಸಾತ್ವಿಕ್ ಮುಜಗೊಂಡ (2) ಎಂದು ಗುರುತಿಸಲಾಗಿದೆ.

ಜಮೀನಿನಲ್ಲಿ ಆಟವಾಡಲು ಹೋಗಿದ್ದ ವೇಳೆ ಸಾತ್ವಿಕ್ ಆಯತಪ್ಪಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ.

ಸುದ್ದಿ ತಿಳಿಯುತ್ತಲೇ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವಿನ ಸ್ಥಿತಿ, ರಕ್ಷಣಾ ಕಾರ್ಯಗಳ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.

ಇದನ್ನೂ ಓದಿ: ಸಿದ್ದು ಸರಕಾರ ಮುಂದುವರಿಕೆಗೆ ಲೋಕ ಸಮರದ ಟಾಸ್ಕ್ ನೀಡಿದ ಹೈಕಮಾಂಡ್: ಇಕ್ಬಾಲ್ ಅನ್ಸಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next