Advertisement

ಗೋವಾ ಕಾರವಾರ ಗಡಿಯಲ್ಲಿ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಬಿದ್ದ ಟ್ರಕ್

05:47 PM Jul 01, 2022 | Team Udayavani |

ಪಣಜಿ: ಗೋವಾ ಕಾರವಾರ ಗಡಿ ಭಾಗದಲ್ಲಿ ಇಳಿಜಾರು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸರಕು ತುಂಬಿದ್ದ ಟ್ರಕ್ ಹ್ಯಾಂಡ್‍ಬ್ರೇಕ್‍ಗೆ ನಿಲ್ಲದೆಯೇ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಬಿದ್ದ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ಶುಕ್ರವಾರ ಬೆಳಗ್ಗೆ ಗೋವಾದಿಂದ ಕಾರವಾರ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಗೋವಾ ಕಾರವಾರ ಗಡಿಯಲ್ಲಿ ಟ್ರಕ್‍ನ್ನು ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲಿಯೇ ಇದ್ದ ಆರ್ ಟಿಓ ಕಚೇರಿಗೆ ತೆರಳಿದ್ದ. ಸಂದರ್ಭದಲ್ಲಿ ಟ್ರಕ್ ತಾನಾಗಿಯೇ ಹಿಮ್ಮುಖವಾಗಿ ಚಲಿಸಿ ಕಂದಕಕ್ಕೆ ಬಿದ್ದಿದೆ. ಅದೃಷ್ಟವಶಾತ್ ಟ್ರಕ್‍ನಲ್ಲಿದ್ದ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next