Advertisement

ಸೈನಿಕ ಹುಳುಗಳನ್ನು ಹಿಡಿಯುವ ಉಪಾಯ

08:12 PM Oct 06, 2019 | Team Udayavani |

ಮೆಕ್ಕೆ ಜೋಳಕ್ಕೆ ದಾಳಿ ಇಡುವ ಕೀಟಗಳಲ್ಲಿ ಸೈನಿಕ ಹುಳುಗಳದ್ದೇ ಪ್ರಾಬಲ್ಯ. ಅದನ್ನು ಹತೋಟಿಯಲ್ಲಿಡಲು ಸೂಕ್ತವಾದ ಮಾರ್ಗಗಳಲ್ಲೊಂದು “ಫೆರೋಮೋನ್‌ ಟ್ರ್ಯಾಪ್‌. ಫೆರೋಮೋನ್‌ ಎಂದರೆ ಹೆಣ್ಣು ಸೈನಿಕ ಹುಳುಗಳು ಸ್ರವಿಸುವ ಹಾರ್ಮೋನ್‌. ಅದರಿಂದಲೇ ಅವುಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಹೆಣ್ಣು ಸೈನಿಕಹುಳುಗಳನ್ನು ಆಕರ್ಷಿಸುವುದು. ಈ ಫೆರೋಮೋನನ್ನು ಲ್ಯಾಬ್‌ನಲ್ಲಿ ತಯಾರಿಸಿ ಟ್ರ್ಯಾಪ್‌ ನಿರ್ಮಿಸಿರುತ್ತಾರೆ. ಇದು ಗಂಡು ಸೈನಿಕ ಹುಳುಗಳನ್ನು ಮಾತ್ರ ಆಕರ್ಷಿಸುತ್ತದೆ. ಇದರಿಂದಾಗಿ ಸಂತಾನೋತ್ಪತ್ತಿ ಉಂಟಾಗದೆ ಅವುಗಳ ಸಂಖ್ಯೆ ಕುಗ್ಗುತ್ತಾ ಹೋಗುತ್ತದೆ. ಈ ಫೆರೋಮೋನ್‌ ಟ್ರ್ಯಾಪ್‌ ಮೇಲ್ಭಾಗದಲ್ಲಿ ಕೊಳವೆ ಇರುತ್ತದೆ. ಅದರ ಕೆಳ ಭಾಗವನ್ನು ಪ್ಲಾಸ್ಟಿಕ್‌ ಕವರ್‌ನಿಂದ ಮುಚ್ಚಲಾಗಿರುತ್ತದೆ. ಒಮ್ಮೆ ಕೊಳವೆಯನ್ನು ಪ್ರವೇಶಿಸಿ ಪ್ಲಾಸ್ಟಿಕ್‌ ಕವರಿನೊಳಗೆ ಬಂದು ಬೀಳುವ ಹುಳುಗಳು ಅಲ್ಲೇ ಬಂಧಿಯಾಗಿಬಿಡುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next