Advertisement

ಚಲಿಸುತ್ತಿದ್ದ ಒಮ್ನಿ ಮೇಲೆ ಮರ ಬಿದ್ದು ತಂದೆ ಮಗ ದುರ್ಮರಣ

07:45 PM Aug 05, 2022 | Team Udayavani |

ಯಳಂದೂರು: ಸಮೀಪದ ಸಂತೇಮರಹಳ್ಳಿ ಕುದೇರು ರಸ್ತೆಯಲ್ಲಿ ಆಲದ ಮರವೊಂದು ಚಲಿಸುತ್ತಿದ್ದ ಓಮ್ನಿ ಮೇಲೆ ಬಿದ್ದ ಪರಿಣಾಮ ತಂದೆ ಮಗ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಹೊನ್ನೂರು ಗ್ರಾಮದ ರಾಜು(48) ಹಾಗೂ ಇವರ ಮಗ ಶರತ್(15)ಎನ್ನುವವರು ಮೃತ ದುರ್ದೈವಿಗಳಾಗಿದ್ದಾರೆ.

Advertisement

ಏಜೆನ್ಸಿಯನ್ನು ನಡೆಸುತ್ತಿದ್ದ ರಾಜು, ತಮ್ಮ ಮಗನ ಜತೆಗೂಡಿ ಕುದೇರು ಗ್ರಾಮಕ್ಕೆ ಅಂಗಡಿಗಳಿಗೆ ಪದಾರ್ಥವನ್ನು ಹಾಕಲು ತೆರಳುತ್ತಿದ್ದ ವೇಳೆಯಲ್ಲೇ ಗಾಳಿ ಬೀಸಿದ್ದರಿಂದ ದೊಡ್ಡ ಆಲದ ಮರವು ಇವರ ವಾಹನದ ಮೇಲೆ ಬಿದ್ದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಂತೆಮರಹಳ್ಳಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next