Advertisement

Dandeli: ಸಮಯಕ್ಕೆ ಸರಿಯಾಗಿ ಬಾರದ ಸಾರಿಗೆ ಬಸ್… ಸಾರಿಗೆ ಘಟಕದ ನಿರ್ಲಕ್ಷ್ಯಕ್ಕೆ ಆಕ್ರೋಶ

07:51 PM May 20, 2023 | Team Udayavani |

ದಾಂಡೇಲಿ: ಸಂಜೆ 4.30 ಗಂಟೆಗೆ ನಗರದ ಬಸ್ ನಿಲ್ದಾಣಕ್ಕೆ ಬರಬೇಕಾದ ಜೋಯಿಡಾ ತಾಲ್ಲೂಕಿನ ರಾಮನಗರಕ್ಕೆ ಹೋಗುವ ಬಸ್ ಸಂಜೆ 6 ಗಂಟೆಯವರೆಗೂ ಬಾರದೆ, ಪ್ರಯಾಣಿಕರು ಕಾದು ಕಾದು ಸುಸ್ತಾಗಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ.

Advertisement

ಜೋಯಿಡಾ ತಾಲ್ಲೂಕಿನ ಜಗಲಬೇಟ್ ಮೂಲಕವಾಗಿ ರಾಮನಗರಕ್ಕೆ ಪ್ರತಿದಿನ ಸಂಜೆ 4.30 ಗಂಟೆಗೆ ಸಾರಿಗೆ ಬಸ್ ಸಂಚಾರವಿದ್ದು, ಶನಿವಾರ ಮಾತ್ರ ಸಂಜೆ 4.30 ಗಂಟೆಗೆ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಹೊರಡಬೇಕಾದ ಬಸ್, ಬಸ್ ನಿಲ್ದಾಣಕ್ಕೆ ಸಂಜೆ 6 ಗಂಟೆಯಾದರೂ ಬಂದಿರಲಿಲ್ಲ. ಪ್ರಯಾಣಿಕರು ಟಿಕೆಟ್ ಕಂಟ್ರೋಲರ್ ಬಳಿ ಬಸ್ ಯಾಕೆ ಬಂದಿಲ್ಲ ಎಂದು ಕೇಳಿದರೆ, ನಾನೇನು ಹೇಳಲಾಗದು, ನೀವು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಕೇಳಿ ಎಂದಿದ್ದಾರೆ. ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಪ್ರಯಾಣಿಕರಿಗೆ ಸಾರಿಗೆ ಘಟಕ ವ್ಯವಸ್ಥಾಪಕರು ನೀವು ಏನು ಬೇಕಾದ್ರೂ ಮಾಡಿ, ಯಾರಿಗೆ ಬೇಕಾದರೂ ದೂರು ನೀಡಿ ಎಂದು ಉದ್ದಟತನದಿಂದ ಮಾತನಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ಬಸ್ ನಿಲ್ದಾಣದಲ್ಲಿ ಸಾರಿಗೆ ಘಟಕದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು.

ಈ ಸಂದರ್ಭದಲ್ಲಿ ಟಿಕೆಟ್ ಕಂಟ್ರೋಲರ್ ಲಿಂಗರಾಜು ಅವರನ್ನು ಮಾತನಾಡಿಸಿದಾಗ 4.30 ಗಂಟೆಗೆ ರಾಮನಗರಕ್ಕೆ ಹೋಗಬೇಕಾದ ಬಸ್ಸಿನ ಚಾಲಕ ರಜೆಯಲ್ಲಿರುವುದರಿಂದ ಈ ಸಮಸ್ಯೆಯಾಗಿದೆ. ಕೂಡಲೆ ಬದಲಿ ಬಸ್ ಬಿಡಲಾಗುವುದು ಎಂದಿದ್ದಾರೆ. ಇನ್ನೂ ರಾಮನಗರ-ಜಗಲಬೇಟ್ ಕಡೆ ಹೋಗಬೇಕಾಗಿದ್ದ ಸಿಇಟಿ ಪರೀಕ್ಷೆಗಾಗಿ ನಗರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗತೊಡಗಿದೆ. ರಾಮನಗರ-ಜಗಲಬೇಟ್ ಮೊದಲಾದ ಕಡೆಗಳಲ್ಲಿ ಬಸ್ಸಿನಿಂದ ಇಳಿದು ಕಾಡುದಾರಿಯಲ್ಲಿ ನಡೆದುಕೊಂಡು ಮನೆ ಸೇರಬೇಕಾದ ಸ್ಥಿತಿಯಿದ್ದು, ಮನೆ ಸೇರುವಾಗ ರಾತ್ರಿಯಾಗುವುದರಿಂದ ವಿದ್ಯಾರ್ಥಿನಿಯರ ಸುರಕ್ಷತೆಗೂ ತೀವ್ರ ತೊಂದರೆಯಾಗಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: ತಾನು ಹುಟ್ಟಿ ಬೆಳೆದ ಚೆನ್ನೈ ಮನೆಯನ್ನೇ ಮಾರಾಟ ಮಾಡಿದ ಗೂಗಲ್‌ ಸಿಇಒ, ಕಣ್ಣೀರಿಟ್ಟ ತಂದೆ…

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next