Advertisement

ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದ ಟ್ರಾಕ್ಟರ್; ತಾಯಿ-ಮಗುವಿಗೆ ಗಾಯ

05:24 PM Apr 04, 2023 | Team Udayavani |

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರೊಂದು ಮನೆಯ ಮೇಲೆ ಬಿದ್ದ ಘಟನೆ ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟದಲ್ಲಿ ನಡೆದಿದೆ. ಘಟನೆಯ ಪರಿಣಾಮ ಮನೆಯಲ್ಲಿದ್ದ ತಾಯಿ ಮಗುವಿಗೆ ಗಾಯವಾಗಿದೆ.

Advertisement

ಟ್ರಾಕ್ಟರ್ ಬಿದ್ದ ರಭಸಕ್ಕೆ ಮನೆ ಸಂಪೂರ್ಣ ಜಖಂ ಆಗಿದ್ದು, ತಾಯಿ ಸಂಧ್ಯಾ, ಒಂದೂವರೆ ವರ್ಷದ ಮಗುವಿಗೆ ಗಾಯವಾಗಿದೆ. ಅದೃಷ್ಟವಶಾತ್ ತಾಯಿ-ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:5 ವರ್ಷದ ಹಿಂದೆ ಕೇರಳದಲ್ಲಿ ನಡೆದಿದ್ದ ಬುಡಕಟ್ಟು ಯುವಕನ ಕೊಲೆ ಪ್ರಕರಣ: 14 ಮಂದಿ ದೋಷಿ

ಗಾಯಾಳುಗಳನ್ನು ಶೃಂಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next