Advertisement

ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ದಾಖಲಾಗಿವೆ 1,228 ಮಹಿಳಾ ದೌರ್ಜನ್ಯ ಪ್ರಕರಣಗಳು

10:05 AM Dec 09, 2019 | sudhir |

ಬೆಂಗಳೂರು: ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಳೆದ 11 ತಿಂಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೋ ಸೇರಿ ಒಟ್ಟು 1,228 ಪ್ರಕರಣಗಳು ದಾಖಲಾಗಿವೆ.

Advertisement

ಪೊಲೀಸ್‌ ಅಂಕಿ ಅಂಶಗಳ ಪ್ರಕಾರ ಜ.1ರಂದು ನ.30ರವರೆಗೆ ನಗರದಲ್ಲಿ 133 ಅತ್ಯಾಚಾರ, 304 ಪೋಕ್ಸೋ, 719 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಶೇ.75-80ರಷ್ಟು ಪ್ರಕರಣಗಳಲ್ಲಿ ಮಾತ್ರ ಇತ್ಯರ್ಥ(ಪೊಲೀಸ್‌ ತನಿಖೆ ಮುಕ್ತಾಯಗೊಂಡಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ) ವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಆಘಾತಕಾರಿ ಅಂಶವೆಂದರೆ ಅಪ್ರಾರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ(ಪೋಕ್ಸೋ) ಪ್ರಕರಣಗಳೇ ಅಧಿಕವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಇತ್ಯರ್ಥವಾಗುತ್ತಿಲ್ಲ. ಕೆಲವೊಮ್ಮೆ ದೂರುದಾರು ಸಾಕ್ಷ್ಯ ನುಡಿಯಲು ಹಿಂದೇಟು ಹಾಕುತ್ತಾರೆ. ಜತೆಗೆ ಸ್ಥಳ ಬದಲಾವಣೆ ಮಾಡುತ್ತಾರೆ.

ಅಂತಹ ಸಂತ್ರಸ್ತರನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸುವುದೇ ದೊಡ್ಡ ಸವಾಲಾಗಿದೆ. ಅಲ್ಲದೆ, ಆರೋಪಿಗಳಿಂದ ಬೆದರಿಕೆ ಹಾಗೂ ಹಣದ ಆಮಿಷಕ್ಕೆ ಒಳಗಾಗಿ ವಿಚಾರಣೆಯಿಂದ ದೂರ ಉಳಿಯುತ್ತಾರೆ. ಆದರೂ ಕೆಲವೊಮ್ಮೆ ಸಂತ್ರಸ್ತರನ್ನು ಹುಡುಕಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುತ್ತವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಶಾಲಾ ಮಕ್ಕಳು ಮತ್ತು ಕೂಲಿ ಕಾರ್ಮಿಕರ ಮಕ್ಕಳ ಮೇಲಿನ ದೌರ್ಜನ್ಯಗಳೇ ಅಧಿಕವಾಗಿವೆ. ಈ ಬಗ್ಗೆ ಪೋಷಕರು ಶಾಲಾ ಶಿಕ್ಷಕರು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಅಲ್ಲದೆ, ತಮ್ಮ ಮಕ್ಕಳಿಗೆ ಸ್ಪರ್ಶಜ್ಞಾನ(ಕೆಟ್ಟ ಹಾಗೂ ಒಳ್ಳೆಯ)ದ ಬಗ್ಗೆ ತಿಳುವಳಿಕೆ ನೀಡಬೇಕು. ಆಗ ಮಾತ್ರ ಒಂದಷ್ಟು ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

Advertisement

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲೂ ಸಂತ್ರಸ್ತೆ ಹಾಗೂ ಆಕೆಯ ಕುಟುಂಬ ಸದಸ್ಯರು ಸರಿಯಾಗಿ ತನಿಖೆಗೆ ಸಹಕಾರ ನೀಡುವುದಿಲ್ಲ. ಕೆಲವೊಮ್ಮೆ ಸಾಕ್ಷ್ಯಗಳ ಕೊರತೆ ಉಂಟಾಗುತ್ತದೆ. ಮತ್ತೂಂದೆಡೆ ವೈಯಕ್ತಿಕ ಕಾರಣಕ್ಕೆ ದೂರುಗಳನ್ನು ನೀಡುತ್ತಾರೆ.ಅನಂತರ ಆರೋಪಿ ಗುರುತಿಸಲು ಕರೆದಾಗ ವಿಚಾರಣೆಯಿಂದ ದೂರ ಉಳಿಯುತ್ತಾರೆ. ಇನ್ನೊಂದೆಡೆ ನ್ಯಾಯಾಲಯ ಕೂಡ ನಿಧಾನಗತಿಯಲ್ಲಿ ವಿಚಾರಣೆ ನಡೆಸುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಳೆದೆರಡು ವರ್ಷಗಳ ಅಂಕಿ ಅಂಶಗಳಲ್ಲೂ ದಾಖಲಾದ ಪ್ರಕರಣಕ್ಕೂ ಇತ್ಯರ್ಥಗೊಂಡ ಪ್ರಕರಣಗೊಂಡ ಪ್ರಕರಣಗಳಿಗೂ ಸಾಕಷ್ಟು ವ್ಯತ್ಯಸವಿದೆ.

  • 2017 ಮತ್ತು 2018ರಲ್ಲಿ ದಾಖಲಾಗಿದ್ದ 131 ಅತ್ಯಾಚಾರ ಪ್ರಕರಣಗಳ ಎಲ್ಲ ಪ್ರಕರಣಗಳು ಇತ್ಯರ್ಥವಾಗಿದೆ. ಹಾಗೆಯೇ ಕಳೆದೆರಡು ವರ್ಷಗಳಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಗಳ ಪೈಕಿ 2017ರಲ್ಲಿ 417ಮತ್ತು 2018ರಲ್ಲಿ 402 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಲೈಂಗಿಕ ದೌರ್ಜನ್ಯಗಳ ಪೈಕಿ 2017ರಲ್ಲಿ 891ಹಾಗೂ 2018ರಲ್ಲಿ 721 ಪ್ರಕರಣಗಳ ಪೊಲೀಸ್‌ ತನಿಖೆ ಮುಕ್ತಾಯಗೊಂಡಿದೆ ಎಂಬುದು ಪೊಲೀಸ್‌ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
Advertisement

Udayavani is now on Telegram. Click here to join our channel and stay updated with the latest news.

Next