Advertisement
1. ಅವನ ಫ್ಯಾಮಿಲಿ ಪ್ರೋಗ್ರಾಮ್‌ಗೆ ನೀವು ಆಹ್ವಾನಿತರಲ್ಲವೇ?ಒಂದು ವೇಳೆ ನಿಮ್ಮ ಪ್ರೀತಿಯನ್ನು ಆತ ಗೌರವಿಸಿದ್ದೇ ಆದಲ್ಲಿ, “ಇವಳೂ ನನ್ನ ಕುಟುಂಬದ ಭಾಗ’ ಎಂದು ನಿಮ್ಮನ್ನು ಗೌರವಿಸುತ್ತಿರುತ್ತಾನೆ. ಆತನ ಕುಟುಂಬದ ಯಾವುದೇ ಶುಭಸಮಾರಂಭದಲ್ಲೂ ನಿಮ್ಮ ಉಪಸ್ಥಿತಿಯನ್ನು ಬಯಸುತ್ತಿರುತ್ತಾನೆ. ಇಲ್ಲ ಹುಡುಗನ ಮನೇಲಿ ಏನ್ ಕಾರ್ಯಕ್ರಮ ನಡೀತೋ ನಂಗೆ ಗೊತ್ತೇ ಇಲ್ಲ ಅಂತ ನೀವಿದ್ದರೆ, ಆತನ ಪ್ರೀತಿಯನ್ನು ಒರೆಗೆ ಹಚ್ಚುವುದು ಒಳ್ಳೇದು.
ನೀನು ಚಿನ್ನ, ನೀನು ರನ್ನ, ನಿನ್ನ ಕಣ್ಣು ಐಶ್ವರ್ಯಾ ರೈ ಥರಾ ಇದೆ… ಹೀಗೆಲ್ಲ ಹೊಗಳಿ ಆತ ಅಟ್ಟಕೇರಿಸುತ್ತಿದ್ದಾನಾ? ಸಂತೋಷ. ಆದರೆ, ಒಂದು ಅನುಮಾನವೂ ಇರಲಿ. ಯಾಕೆ ಗೊತ್ತಾ? ಮದುವೆಯಾಗ ಬಯಸುವ ಹುಡುಗರು ಯಾವತ್ತೂ ಭವಿಷ್ಯದ ಕನಸುಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿರುತ್ತಾರೆ. 3. ನಿಮ್ಮ ಕನಸಿನ ಭಾಗವಾಗಿದ್ದಾನಾ?
ಆತನ ಕೈಕೈ ಹಿಡಿದು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿಕೊಳ್ತೀರಿ, ಕೆಲಸದ ಬಗ್ಗೆ ಹೇಳಿಕೊಳ್ತೀರಿ, ನಾಳೆ ನಾನು ಹೀಗಿರಬೇಕು- ಹಾಗಿರಬೇಕು ಅಂತೆಲ್ಲ ಕನಸುಗಳನ್ನು ಅವನೆದುರು ಹರವಿಡುತ್ತೀರಿ. ಹೀಗೆಲ್ಲ ಹೇಳುವಾಗ ಆತ ಇದಕ್ಕೆ ಸ್ಪಂದಿಸುತ್ತಿದ್ದಾನಾ? ಗಮನಿಸಿ. ಇದಕ್ಕೆ ಪೂರಕವಾಗಿ ಮಾತಾಡುತ್ತಿದ್ದಾನಾ? ನೋಡಿ. ಇಲ್ಲಾಂದ್ರೆ, ಆತ ಕೈಕೊಡಲು ಅರ್ಹ.
Related Articles
ಆತ ತನ್ನ ಅಕ್ಕ- ತಂಗಿಯರು, ಗೆಳೆಯ- ಗೆಳತಿಯರ ಎದುರು “ಇವಳು ನನ್ನ ವುಡ್‌ಬಿ. ಇವಳನ್ನು ನಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದೀನಿ, ಮುಂದೆ ಮದ್ವೆ ಆಗ್ತಿàನಿ’ ಅಂತ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾನಾ? ಒಂದು ವೇಳೆ ತನ್ನ ಪ್ರೇಮವನ್ನು ನಿಗೂಢವಾಗಿ ಇಟ್ಟಿದ್ದಾನೆ ಅಂತಾದರೆ, ಕಿವಿಹಿಂಡಿ ಬುದ್ಧಿ ಹೇಳಿ. ಪ್ರೀತಿಯನ್ನು ಗಟ್ಟಿ ಮಾಡಿಕೊಳ್ಳಿ.
Advertisement
5. ಗಂಡನ ಗುಣಗಳು ಅವನಲ್ಲಿ ಕಾಣುತ್ತಿವೆಯಾ?ನೀವು ಪ್ರೀತಿಸುತ್ತಿರುವ ಹುಡುಗನೊಳಗೆ ಒಬ್ಬ ಆದರ್ಶ ಗಂಡನ ವ್ಯಕ್ತಿತ್ವವನ್ನು ಹುಡುಕುವ ಪ್ರಯತ್ನ ಮಾಡಿ. ಆತನ ಪ್ರತಿ ನಡತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿರಿ. ಇಲ್ಲಾ, ಇವನು ಪ್ರೀತಿ ಅಂತ ಹೇಳಿ ನಾಟಕ ಆಡ್ತಿದ್ದಾನೆ ಅಂತನ್ನಿಸಿದರೆ, ಆದಷ್ಟು ಬೇಗ ಆ ಸುಳಿಯಿಂದ ಹೊರಬನ್ನಿ. 6. ಲಿವ್ ಇನ್ ಅಂತ ಕತೆ ಹೊಡೀತಾನಾ?
ನೀವು ಇಷ್ಟಪಟ್ಟ ಹುಡುಗನಿಗೆ ಲಿವ್ ಇನ್ ಸಂಬಂಧದಲ್ಲಿ ಹೆಚ್ಚು ಆಸಕ್ತಿ ಇದೆಯಾ? ಮದುವೆ ಸಂಪ್ರದಾಯವನ್ನು ಆತ ಗೌರವಿಸುತ್ತಿದ್ದಾನಾ? ಈ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಿ. ಅದ್ಧೂರಿ ಮದುವೆ ಅಲ್ಲದಿದ್ದರೂ, ಸರಳ ಮದುವೆಗಾದರೂ ಅವನ ಒಲವು ಇದೆಯಾ ಎಂಬುದನ್ನಾದರೂ ಪರಿಶೀಲಿಸಿ.