Advertisement

ಭಯೋತ್ಪಾದಕ ಸಂಘಟನೆ ನಂಟು; ಪ್ರಕರಣ ಎನ್‌ಐಎ ತೆಕ್ಕೆಗೆ

01:08 AM Sep 22, 2022 | Team Udayavani |

ಬೆಂಗಳೂರು: ಶಿವಮೊಗ್ಗದಲ್ಲಿ ಸೆರೆಯಾದ ಇಬ್ಬರು ಶಂಕಿತ ಉಗ್ರರು ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆಯ ಸದಸ್ಯರಾಗಿದ್ದು, ರಾಜ್ಯದಲ್ಲಿ ಹಿಂದೂ ಮುಖಂಡರು ಮತ್ತು ಹಿಂದೂಪರ ಇರುವ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಸಂಗತಿ ತನಿಖಾ ಸಂಸ್ಥೆಗಳ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇದರ ಮಧ್ಯೆ ಶಂಕಿತರಿಬ್ಬರ ಬಂಧನ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿದೆ.

Advertisement

ರಾಜ್ಯ ಗುಪ್ತಚರ, ಆಂತರಿಕ ಭದ್ರತಾದಳ(ಐಎಸ್‌ಡಿ) ಮಾಹಿತಿ ಮೇರೆಗೆ ಶಿವಮೊಗ್ಗ ಪೊಲೀಸರು ತನಿಖೆ ನಡೆಸು ತ್ತಿದ್ದರು. ತನಿಖಾಧಿಕಾರಿಗಳಿಂದ ಪ್ರಕ ರಣದ ಇಂಚಿಂಚೂ ಮಾಹಿತಿಯನ್ನು ಎನ್‌ಐಎ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಸುದ್ದ ಗುಂಟೆಪಾಳ್ಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 12ನೇ ಆರೋಪಿಯಾದ ಅಬ್ದುಲ್‌ ಮತೀನ್‌ ಅಹ್ಮಮದ್‌ ತಾಹ ಮತ್ತು 13ನೇ ಆರೋಪಿ ಹುಸೇನ್‌ನ (ತಲೆಮರೆಸಿಕೊಂಡಿರುವವರು) ಆಪ್ತರು ಇವರೆಂಬುದು ತಿಳಿದುಬಂದಿದೆ.

2020ರ ಅಲ್‌-ಹಿಂದ್‌ ಪ್ರಕರಣ ದಲ್ಲಿ ಅಬ್ದುಲ್‌ ಮತೀನ್‌ ಈ ಬಂಧಿತ ಶಂಕಿತರಿಗೆ ಟೆಲಿಗ್ರಾಂ ಮೂಲಕ ಮಂಗಳೂರಿ ನಲ್ಲಿ ಪ್ರಚೋದಿತ ಗೋಡೆ ಬರಹ ಬರೆಯುವಂತೆ ಟೂಲ್‌ ಕಿಟ್‌ ಕಳುಹಿ ಸಿದ್ದ ಎನ್ನಲಾಗಿದೆ. ಅದರಂತೆ ಇಬ್ಬರು ಪ್ರಚೋದಿತ ಗೋಡೆಬರಹ ಬರೆದು, ಜೈಲು ಸೇರಿದ್ದರು.

ಇವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಬ್ದುಲ್‌ ಮತ್ತೀನ್‌ “ಪ್ರಶಂಸನಾ ಪತ್ರ’ ಕಳುಹಿಸಿದ್ದನಂತೆ. ಇದರಿಂದ ಉತ್ತೇಜಿತರಾದ ಶಂಕಿತರು, ತಮ್ಮಸೂಚನೆ ಪಾಲಿಸುವುದಾಗಿ ಹೇಳಿದ್ದರಂತೆ. ಆ ಬಳಿಕ ಇಬ್ಬರನ್ನು ಅಲ್‌-ಹಿಂದ್‌ ಸಂಘಟನೆ ಸದಸ್ಯರ ವಾಟ್ಸ್‌ಆ್ಯಪ್‌ ಗ್ರೂಪ್‌ ಮತ್ತು ಟೆಲಿಗ್ರಾಂ ಗ್ರೂಪ್‌ಗ್ಳಲ್ಲಿ ಸೇರಿಸಲಾಗಿತ್ತು. ಆದರೆ, ಐದಾರು ತಿಂಗಳ ಹಿಂದೆ ಇಬ್ಬರನ್ನೂ ಮತ್ತೀನ್‌ ಗ್ರೂಪ್‌ನಿಂದ ಹೊರಹಾಕಿದ್ದು, ಪ್ರತ್ಯೇಕ ಸಂಘಟನೆಗೆ ಸೂಚಿಸುತ್ತಿದ್ದ ಎನ್ನಲಾಗಿದೆ.

Advertisement

ಹಿಂದೂ ಮುಖಂಡರ
ಹತ್ಯೆಗೆ ಸಂಚು
ಇದೇ ವರ್ಷ ಹಿಂದೂ ಮುಖಂಡ ಹರ್ಷನ ಕೊಲೆಯಾದ ಬಳಿಕ ಸಂಘಟನೆಯನ್ನು ಶಿವಮೊಗ್ಗದಲ್ಲಿ ಬಲ ಪಡಿಸಲು ಇವರಿಗೆ ಮತ್ತೀನ್‌ ಸೂಚನೆ ನೀಡಿದ್ದರೆನ್ನಲಾಗಿದೆ. ವೀರಸಾವರ್ಕರ್‌ ಗಲಾಟೆಯಿಂದ ಆಕ್ರೋಶಗೊಂಡ ಶಂಕಿತರು, ಶಿವಮೊಗ್ಗ ಮತ್ತು ರಾಜ್ಯದ ದಕ್ಷಿಣ ಭಾಗದ ಯಾವುದಾದರೂ ಒಂದು ಜಿಲ್ಲೆಯಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಬೇಕು. ಅದು ಪ್ರವಾಸಿ ತಾಣ ಅಥವಾ ಸರಕಾರಿ ಸಂಸ್ಥೆ, ಹಿಂದೂ ಸಂಘಟನೆಯ ಕಾರ್ಯಕ್ರಮವಾಗಿರಬಹುದು. ಒಟ್ಟಿನಲ್ಲಿ ದೊಡ್ಡ ಕೃತ್ಯ ಎಸಗಬೇಕು ಎಂದು ಮಾಜ್‌ ಡಾರ್ಕ್‌ವೆಬ್‌ ಸೈಟ್‌ ಮೂಲಕ ಮತ್ತೀನ್‌ನೊಂದಿಗೆ ಚರ್ಚಿಸಿದ್ದ ಎನ್ನಲಾಗಿದೆ.

ಇದೇ ವೇಳೆ ಶಿವಮೊಗ್ಗದಲ್ಲಿ ಹರ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿದೆ.ಅಂಥದ್ದೇ ರೀತಿಯಲ್ಲಿ ಶಿವಮೊಗ್ಗ ಮತ್ತು ಮಂಗಳೂರು ಮೂಲದ ಹಿಂದೂ ಮುಖಂಡರ ಹತ್ಯೆಗೈದರೆ ಹಿಂದೂ ಮುಖಂಡರಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಲಿದೆ ಎಂದು ಯೋಚಿಸಲಾ ಗಿತ್ತು. ಅದರಂತೆ ಮಾಜ್‌ ಮುನೀರ್‌ ಅಹಮ್ಮದ್‌, ಸೈಯದ್‌ ಯಾಸೀನ್‌ ಮತ್ತು ಶಾರೀಕ್‌ ಸುಧಾರಿತ ಸ್ಫೋಟಕ ವಸ್ತು(ಐಇಡಿ) ಸ್ಫೋಟದ ತರಬೇತಿಯನ್ನು ತುಂಗಾ ತಟದಲ್ಲಿ ಮಾಡುತ್ತಿದ್ದರು. ಈ ಪೈಕಿ ಶಾರೀಕ್‌ಗೆ “ಹವಾಲಾ’ ಮೂಲಕ ಹಣ ಬರುತ್ತಿತ್ತು. ಅದನ್ನು ಸ್ಫೋಟಕ ವಸ್ತುಗಳ ಖರೀದಿಗೆ ಬಳಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಮುಖವಾಣಿ ವ್ಯಾಸಂಗ
ಬಂಧಿತ ಇಬ್ಬರು ಶಂಕಿತರು ಐಸಿಸ್‌ ಸಂಘಟನೆ ನಿಯತಕಾಲಿಕೆಯನ್ನು ಪಡೆದು ಅಧ್ಯಯನ ಮಾಡುತ್ತಿದ್ದರು. ಜತೆಗೆ ಕೇರಳ ಮೂಲದ ಬೇಸ್‌ ಮೂಮೆಂಟ್‌ ಸಂಘಟನೆ ಮಾದರಿಯಲ್ಲಿ ಮಲೆನಾಡು ಮತ್ತು ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ದತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next