Advertisement
200ಕ್ಕೂ ಗಿಡಗಳು: ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಕಳೆ ಕಿತ್ತು ಹಸಿರು ಮಾಡಿದವರು ಶ್ರೀರಂಗಪಟ್ಟಣ ತಾಲೂಕಿನ ಗೌರಿ ಪುರಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಕುಮಾರ್ ಗಮನ ಸೆಳೆದಿದ್ದಾರೆ. ಇವರ ಪರಿಸರ ಪ್ರೇಮದ ಕಳಕಳಿಯ ಕಾರಣದಿಂದ ಈ ಶಾಲೆಯಲ್ಲಿ
200 ಕ್ಕೂ ಹೆಚ್ಚು ಗಿಡಮರಗಳು, ಸಸ್ಯಗಳು ಹಾಗೂ ತರಕಾರಿ ಗಿಡಗಳಿದ್ದು, ಹಸಿರಿನಿಂದ ನಳನಳಿಸ್ತಿದೆ. ಇವರು ಬಂದ ಮೇಲೆ ಈ ಶಾಲೆಯಲ್ಲಿ ಈ ವಾತಾವರಣ ನಿರ್ಮಾಣವಾಗಿದ್ದು, ಈ ಶಾಲೆಗೆ ಮಾದರಿ ಪರಿಸರ ಮಿತ್ರ ಶಾಲೆ ಎಂದು ಜಿಲ್ಲಾ ಶಿಕ್ಷಣ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿ, ಈ ಶಿಕ್ಷಕನ ಸೇವೆಯನ್ನು ಶ್ಲಾಘಿಸಿದೆ.
ವಿದ್ಯಾರ್ಥಿಗಳ ಹೆಸರಲ್ಲಿ ಗಿಡ: ಪರಿಸರ ಪ್ರೇಮಿ ಶಿಕ್ಷಕ ರವಿಕುಮಾರ್ ತಮ್ಮ ಸ್ವಂತ ಹಣದಲ್ಲಿ, ಶಾಲೆಯ ಗೋಡೆಗಳಿಗೆ ಬಣ್ಣ ಬಳಿಸಿ ಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ,ನೀಡುತ್ತಾ ಸ್ವಚ್ಛತೆ ಬಗ್ಗೆ ಅರಿವೂ ಮೂಡಿಸಿದ್ದು, ಶಾಲೆ ಚಿಕ್ಕದಾಗಿದ್ದರೂ ಚೊಕ್ಕವಾಗಿಟ್ಟುಕೊಂಡಿದ್ದು, ಪರಿಸರವನ್ನು ಸುಂದರವಾಗಿಟ್ಟಿದ್ದಾರೆ. ಪರಿಸರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ಮತ್ತು ತರಗತಿಯ ಒಳಗೆ ಆಕರ್ಷಿಸುವಂತೆ ಮಾಡಿದ್ದಾರೆ. ಇವ್ರರ ಪರಿಸರ ಕಳಿಕಳಿಯಿಂದ ಶಾಲೆಯಲ್ಲಿರುವ ಪ್ರತಿಯೊಂದು ಗಿಡ ಮರಗಳ ನಿರ್ವಹಣೆಯನ್ನು ಓರ್ವ ವಿದ್ಯಾರ್ಥಿ ವಹಿಸಿ ಅವುಗಳು ಮೇಲೆ ಆಯಾ ವಿದ್ಯಾರ್ಥಿ ಹೆಸರು ಬರೆಸಿದ್ದು, ಇದರಿಂದ ಮಕ್ಕಳು ಶಾಲೆಯ ಪರಿಸರದ ಮೇಲೆ ಹೆಚ್ಚಿನ ಮಮಕಾರ ಬೆಳೆಸಿಕೊಂಡಿದ್ದಾರೆ. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನದ ಜೊತೆಗೆ ಪರಿಸರ ಜ್ಞಾನವನ್ನು ತುಂಬಿರುವ ಈ ಇಂತಹ ಈ ಆದರ್ಶ ಶಿಕ್ಷಕರ ಕೊಡುಗೆ ನಿಜಕ್ಕೂ ಶ್ರೀರಂಗಪಟ್ಟಣದಲ್ಲಿ ಶ್ಲಾಘನೀಯ ಎನಿಸಿದೆ.
ರವಿಕುಮಾರ್ ಅವರು ಶಿಕ್ಷಕರಾಗಿ ಮಾತ್ರವಲ್ಲದೇ ಸರ್ಕಾರದ ಯಾವುದೇ ಕಾರ್ಯಕ್ರಮವಾದರೂ ನಿರೂಪಣೆ ಮಾಡುತ್ತಾ ನಿರೂಪಕರಾಗಿ ಹೆಸರು ಗಳಿಸಿದ್ದಾರೆ. ಕವಿ, ಲೇಖಕರಾಗಿದ್ದು, “ಮುಗಿಲತಾರೆ’ ಕಾದಂಬರಿ ಬರೆದಿದ್ದು, ಸ್ನೇಹಿತರೊಂದಿಗೆ ಮುಂಜಾನೆ ಧ್ವನಿ ಸುರಳಿಯನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿ ಬಹುಮುಖ ಪ್ರತಿಭೆಯ ಶಿಕ್ಷಕರಾಗಿದ್ದಾರೆ. ಇದರ ಜೊತೆಗೆ ತಾವು ಹಿಂದೆ ಕೆಲಸ ಮಾಡಿದ್ದ ಇದೇ ತಾಲೂಕಿನ ಮರಳಗಾಲದಲ್ಲಿ ರಣಧೀರ ಕಂಠೀರವ ಪಡೆ ಹೆಸರಿನಲ್ಲಿ ಹಳೇ ವಿದ್ಯಾರ್ಥಿಗಳನ್ನು ಸಂಘಟಿಸಿ ಆ ಮೂಲಕ ಸಾಮಾಜಿಕ
ಕಾರ್ಯದಲ್ಲಿ ಅವರನ್ನ ತೊಡಗಿಸಿದ್ದು, ಇಂದಿಗೂ ಕೂಡ ಆ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಕೆಲಸವನ್ನು ಪ್ರಶಂಸಿಸುತ್ತಾರೆ.
– ರವಿಕುಮಾರ್, ಶಿಕ್ಷಕ, ಗೌರಿಪುರ ಸ.ಪ್ರಾ.ಶಾಲೆ
Related Articles
Advertisement