Advertisement

ಒಬ್ಬ ಶಿಕ್ಷಕ ಹೇಗೆ ಇರಬಾರದೆಂದು ಕಲಿತೆ

12:30 AM Sep 05, 2018 | |

ಇವತ್ತು ಶಿಕ್ಷಕರ ದಿನಾಚರಣೆ. ಇದನ್ನು ಶಿಕ್ಷಕರ ದಿನವೆಂದು ಏತಕ್ಕಾಗಿ ಕರೆಯುತ್ತಾರೆಂದು ನಿಮಗೆ ತಿಳಿದಿದೆಯೆ? ಭಾರತದ ಪ್ರಥಮ ಉಪರಾಷ್ಟ್ರಪತಿ ಮತ್ತು ಎರಡನೆ ರಾಷ್ಟ್ರಪತಿಯಾದ ರಾಧಾಕೃಷ್ಣನ್‌ರವರು ಶಾಲಾ ಶಿಕ್ಷಕರಾಗಿದ್ದರು. ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ. ನಮ್ಮ ರಾಷ್ಟ್ರಪತಿಯವರು, ಅದಕ್ಕೂ ಮೊದಲು ಶಾಲಾ ಶಿಕ್ಷಕರಾಗಿದ್ದರೆಂಬುದು, ನಮ್ಮ ದೇಶದ ಶಿಕ್ಷಕರೆಲ್ಲರಿಗೂ ಒಂದು ಅದ್ಭುತವಾದ ಗೌರವ.

Advertisement

ಭಾರತೀಯ ಸಂಸ್ಕೃತಿಯಲ್ಲಿ ನಾವು ಶಿಕ್ಷಕರನ್ನು ನಮ್ಮ ಜೀವನದ ಬಹು ಮುಖ್ಯ ಭಾಗವೆಂದು ಗುರುತಿಸಿದ್ದೇವೆ. ಎಷ್ಟರ ಮಟ್ಟಿಗೆಯೆಂದರೆ, ಆಚಾರ್ಯ ದೇವೋ ಭವ ಎಂದು ಹೇಳಿದ್ದೇವೆ – ಶಿಕ್ಷಕರು ದೇವರಿದ್ದಂತೆ. ಸಾಮಾನ್ಯವಾಗಿ, ಮಕ್ಕಳು, ತಮ್ಮ ತಂದೆತಾಯಿಗಳಿಗಿಂತ, ಶಿಕ್ಷಕರ ಜೊತೆಗೆ ಹೆಚ್ಚು ಕಾಲ ಕಳೆಯುತ್ತಾರೆ. ತಮಗಿಂತ ಬೇರೊಬ್ಬರು ತಮ್ಮ ಮಕ್ಕಳ ಮೇಲೆ ಒಳ್ಳೆಯ ಪ್ರಭಾವ ಬೀರಬಹುದೆಂಬ ಒಂದು ಪರಿಕಲ್ಪನೆಯೊಂದಿಗೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಯಾವುದು ನನ್ನದು, ಯಾವುದು ನನ್ನದಲ್ಲವೆಂಬ ಭಾವನೆಯಿಂದ ಕುರುಡಾಗಿ, ಬಹಳಷ್ಟು ಜನರು ಪ್ರೀತಿ ಮತ್ತು ಸಂತೋಷದ ಪರಿಸರವನ್ನು ಸೃಷ್ಟಿಸುವಲ್ಲಿ ವಿಫ‌ಲ­ರಾಗುತ್ತಾರೆ. ಒಂದಿಷ್ಟು ಪ್ರೀತಿಯಿಂದ ಆರಂಭಿಸಿ, ಅದರಲ್ಲೇ ವಿಪರೀತವಾಗಿ ಸಿಕ್ಕಿ­ಹಾಕಿಕೊಂಡು ಆತಂಕದ ವಾತಾವರಣವನ್ನು ಸೃಷ್ಟಿಸುತ್ತಾರೆ. ಆತಂಕವಿದ್ದಲ್ಲಿ ಮಕ್ಕಳ ಬೆಳವಣಿಗೆ ಉತ್ತಮವಾದ ರೀತಿಯಲ್ಲಿ ಆಗುವುದಿಲ್ಲ.

ಒಬ್ಬ ವ್ಯಕ್ತಿಯ ರಚನಾ ಪ್ರಕ್ರಿಯೆಯಲ್ಲಿ ಅಥವಾ ಒಂದು ಸಮಾಜವನ್ನು ರಚಿಸುವಲ್ಲಿ ಆಥವಾ ದೇಶ, ಜಗತ್ತನ್ನು ರಚಿಸುವಲ್ಲಿ, ಒಬ್ಬ ಶಿಕ್ಷಕನ ಪಾತ್ರವು ಬಹಳ ಮಹತ್ವದ್ದು. ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಮತ್ತು ನಿರ್ದಿಷ್ಟ ವಿಷಯದ ಬಗ್ಗೆ ಆಸಕ್ತಿಯನ್ನು ಬೆಳೆಸುವಲ್ಲಿ ಖಂಡಿತವಾಗಿಯೂ ಶಿಕ್ಷಕರಿಗೆ ದೊಡ್ಡ ಪಾತ್ರವಿದೆ. 

ಅನೇಕ ಮಕ್ಕಳಿಗೆ, ಒಂದು ವಿಷಯವನ್ನು ಯಾವ ಶಿಕ್ಷಕರು ಹೇಳಿಕೊಡುತ್ತಿ¨ªಾರೆನ್ನುವುದು ಅವರು ಆ ವಿಷಯವನ್ನು ಇಷ್ಟಪಡುತ್ತಾರೋ ಅಥವಾ ದ್ವೇಷಿಸುತ್ತಾರೋ ಎನ್ನುವುದನ್ನು ನಿರ್ಧರಿಸುತ್ತದೆ ಮತ್ತು ಆ ವಿಷಯವು ಆ ಶಿಕ್ಷಕನೊಂದಿಗೆ ಗುರುತಿಸ­ಲ್ಪ­ಡುತ್ತದೆ. ಶಿಕ್ಷಕರು ಸ್ಫೂರ್ತಿ ನೀಡುವಂಥ­ವರಾಗಿದ್ದರೆ, ಆ ವಿಷಯವು ಇದ್ದಕ್ಕಿದ್ದಂತೆ ಆಸಕ್ತಿದಾಯಕ­­ವಾಗುತ್ತದೆ.

ಶಿಕ್ಷಕರು ಹೇಳುವುದೆಲ್ಲವೂ ಈಗ ಅಂತರ್ಜಾಲ­ದಲ್ಲಿ ಲಭ್ಯವಿರುವ ಕಾರಣ,  ಶಿಕ್ಷಕರಿಗೆ ಪ್ರಾಮುಖ್ಯತೆ ಇಲ್ಲವೆಂದು ಇಂದಿನ ಪೀಳಿಗೆಯವರು ಭಾವಿಸು­ತ್ತಾರೆ. ಹಾಗಲ್ಲ, ಶಿಕ್ಷಕರ ಪ್ರಾಮುಖ್ಯತೆಯು ಈಗ ಇನ್ನೂ ಹೆಚ್ಚಾಗಿದೆಯೆಂದು ನನಗನಿಸುತ್ತದೆ. ಮಾಹಿತಿಯನ್ನು ರವಾನಿಸುವ ಹೊರೆಯು ಈಗ ಇಲ್ಲದಿರುವುದರಿಂದ, ಶಿಕ್ಷಕರ ಕೆಲಸವು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಮತ್ತು ವರ್ಧಿಸುವುದಾಗಿದೆ-ಮುಂಚಿನಿಂದಲೂ, ಇದು ಅವರ ಪ್ರಮುಖ ಕೆಲಸವಾಗಿತ್ತು.

Advertisement

ನನ್ನ ವಿದ್ಯಾರ್ಥಿ ದಿನಗಳಲ್ಲಿ, ನಾನು ಕೂಡ ಅನೇಕ ಶಿಕ್ಷಕರನ್ನು ಕಂಡಿದ್ದೇನೆ. ಒಬ್ಬ ಶಿಕ್ಷಕನು ಹೇಗೆ ಇರಬಾರದೆಂದು ನಾನು ಅವರಿಂದ ಕಲಿತೆನು – ಇದು ನಾನು ಕಲಿತ ಅತೀ ಅಮೂಲ್ಯವಾದ ಪಾಠ. ಮೊದಲ ಹದಿನೈದು ವರ್ಷಗಳಲ್ಲಿ ಮಕ್ಕಳ ಮೇಲೆ ಆಗುವ ಪ್ರಭಾವಗಳು ಅವರ ಮುಂದಿನ ಜೀವನದ ಹಲವು ವಿಷಯಗಳನ್ನು ನಿರ್ಧರಿಸುತ್ತವೆ. ನಾವೇನಾ­ದರೂ ದೇಶವನ್ನು ಅತ್ಯನ್ನತ ಮಟ್ಟಕ್ಕೆ ಏರಿಸ­ಬೇಕೆಂದರೆ, ಪ್ರತಿಭೆ ಮತ್ತು ಸಾಮರ್ಥ್ಯದಲ್ಲಿ ಶ್ರೇಷ್ಠ ರಾ­­ಗಿ ಇರುವವರು ಆ ದೇಶದ ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಬೇಕು. ಆದರಿಂದು, ನಮ್ಮಲ್ಲಿರುವ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಯ ಕಾರಣ, ಜನರಿಗೆ ಬೇರೆಲ್ಲಿಯೂ ಕೆಲಸ ಸಿಗದಿ¨ªಾಗ, ಅವರು ಶಿಕ್ಷಕರಾಗುತ್ತಾರೆ. ಇದು ಬದಲಾಗಲೇ ಬೇಕು. ಇದು ಬದಲಾಗದಿದ್ದರೆ, ಒಂದು ಉತ್ತಮವಾದ ಸಮಾಜವನ್ನು ನಮ್ಮಿಂದ ನಿರ್ಮಿಸಲಾಗುವುದಿಲ್ಲ. ನಾವು ಕೆಳಮಟ್ಟದ ಮನುಷ್ಯರು, ಕೆಳಮಟ್ಟದ ಸಮಾಜ ಮತ್ತು ಕೆಳಮಟ್ಟದ ದೇಶವನ್ನು ನಿರ್ಮಿಸುತ್ತೇವೆ. ಇದು ಈಗಾಗಲೇ ನಡೆಯು­ತ್ತಿರುವುದನ್ನು ನೀವು ನೋಡಬಹುದು. ಬಹಳಷ್ಟು ಶಾಲೆಗಳಲ್ಲಿ ಸ್ಫೂರ್ತಿ ನೀಡುವ, ಪ್ರೇರೇಪಿಸುವ ಶಿಕ್ಷಕರು ಬಹಳ ಕಡಿಮೆ. ಅಧ್ಯಾಪನೆಯು ಕೇವಲ ಒಂದು ವೃತ್ತಿಯಾಗಿ ಮಾರ್ಪಟ್ಟಿದೆ, ಅಷ್ಟೆ. ಅಗತ್ಯವಿರುವುದನ್ನು ಮಾಡಲು ಯಾರೂ ಹೆಚ್ಚುವರಿ ಹೆಜ್ಜೆಯನ್ನು ಇಡಲು ಸಿದ್ಧರಿಲ್ಲ. ರಚನಾ ಪ್ರಕ್ರಿಯೆಯಲ್ಲಿರುವ ಮಾನವತೆಯ ಭಾಗವಾಗಿರುವ ಮಕ್ಕಳೊಂದಿಗೆ ನೀವು ಕೆಲಸ ಮಾಡುವಾಗ, ಅವರನ್ನು ಹೇಗೆ ಬೆಳೆಸುವಿರಿ ಎನ್ನುವುದು ನಿಮ್ಮ ಕೈಯಲ್ಲಿದೆ. ಇನ್ನೊಂದು ಜೀವವನ್ನು ಸಕಾರಗೊಳಿಸುವುದು ಒಂದು ಅದ್ಭುತವಾದ ಭಾಗ್ಯ – ಮನುಷ್ಯರಿಗೆ ಸಿಗುವ  ಮಹಾನ್‌ ಹೊಣೆಗಾರಿಕೆ ಮತ್ತು ಪುಣ್ಯಗಳÇÉೊಂದು.  ಹಾಗಾಗಿ, ಇಂತಹ ವಿಶೇಷ ಹಕ್ಕನ್ನು ನೀವು ಯಾರಿಗಾದರೂ ಒಪ್ಪಿಸಿದರೆ, ಅವರಲ್ಲಿ ಅತ್ಯುನ್ನತ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಸದ್ಭಾವನೆ ಇರುವುದು ಅತೀ ಮುಖ್ಯ.

ಸದ್ಗುರು, ಈಶ ಪ್ರತಿಷ್ಠಾನ

Advertisement

Udayavani is now on Telegram. Click here to join our channel and stay updated with the latest news.

Next