Advertisement

ರಾಜಕೀಯ ಶಕ್ತಿಯಾಗಿದ್ದ ಕತ್ತಿ: ಪವಾರ

02:51 PM Sep 08, 2022 | Team Udayavani |

ವಾಡಿ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ಅಗಲಿಕೆಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸ್ಥಳೀಯ ಭಾಜಪ ಮುಖಂಡರು, ಉಮೇಶ ಕತ್ತಿ ಅವರ ರಾಜಕೀಯ ಜೀವನವನ್ನು ಮೆಲುಕು ಹಾಕಿದರು.

Advertisement

ಈ ವೇಳೆ ಮಾತನಾಡಿದ ಬಿಜೆಪಿ ನಗರ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಮ ಪವಾರ, ಜನಪರ ರಾಜಕಾರಣಿಯಾಗಿದ್ದ ಸಚಿವ ಉಮೇಶ ಕತ್ತಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿದ್ದರು. ಸತತ ಎಂಟು ಬಾರಿ ವಿಧಾಸಭೆಗೆ ಆಯ್ಕೆಯಾಗುವ ಮೂಲಕ ತಾವೊಬ್ಬ ಜನಪರ ಚಿಂತಕ ಎಂಬುದು ಸಾಬೀತು ಪಡಿಸಿದ್ದರು. ರಾಜ್ಯ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸುವ ಮೂಲಕ ಜನರ ಮನೆಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಜನಮನ್ನಣೆ ಗಳಿಸಿದ್ದರು. ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದ ಕತ್ತಿಯವರಿಗೆ ಪಕ್ಷ ಗೌರವದಿಂದ ಕಂಡಿತ್ತು. ವಿಧಿ ಯಾಟ ನಮ್ಮನ್ನೆಲ್ಲ ಅವರಿಂದ ಅಗಲಿಸಿತು ಎಂದರು.

ಬಿಜೆಪಿ ತಾಲೂಕು ಉಪಾಧ್ಯಕ್ಷರಾದ ಗಿರಿಮಲ್ಲಪ್ಪ ಕಟ್ಟಿಮನಿ, ವೀರಣ್ಣ ಯಾರಿ, ಮುಖಂಡರಾದ ವಿಠ್ಠಲ ನಾಯಕ, ಅರ್ಜುನ ಕಾಳೇಕರ, ರವಿ ನಾಯಕ, ಹರಿ ಗಲಾಂಡೆ, ಅಂಬಾದಾಸ ಜಾಧವ, ದೌಲತರಾವ್‌ ಚಿತ್ತಾಪುರಕರ, ಸತೀಶ ಸಾವಳಗಿ, ಶಿವಶಂಕರ ಕಾಶೆಟ್ಟಿ, ರಾಜು ಕೋಲಿ, ಅರ್ಜುನ ದಹಿಹಂಡೆ, ಅಶೋಕ ತೇಲಕರ್‌, ಗಣಪತರಾವ್‌ ಸುತ್ರಾವೆ, ಹೀರಾ ನಾಯಕ, ಮಲ್ಲಿಕಾರ್ಜುನ ರೆಡ್ಡಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next