Advertisement

ಪಡಿತರ ಚೀಟಿ ಕುರಿತ ಸಮೀಕ್ಷೆ ಉತ್ತಮ ನಿರ್ಧಾರ

12:26 AM Jul 28, 2023 | Team Udayavani |

ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದಾಗಲೂ ಅದರ ನೀತಿ ನಿರೂ ಪಣೆಯಲ್ಲೂ ಬದಲಾವಣೆಗಳಾಗುತ್ತವೆ. ಚುನಾವಣೆಗೂ ಮೊದಲು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ಅನುಷ್ಠಾನ, ಅದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣ ಸಹಿತ ಮತ್ತಿತರ ಅಂಶಗಳ ಹಿನ್ನೆಲೆಯಲ್ಲಿ ಇಂತಹ ಬದಲಾವಣೆಗಳು ಸಹಜ. ಆದರೆ ಅವು ಬಹು ಪಾಲು ಜನಹಿತವಾಗಿಯೇ ಇರಬೇಕು ಎಂಬುದು ಜನರ ಆಶಯ.

Advertisement

ಯಾರೊಬ್ಬರೂ ಹಸಿದ ಹೊಟ್ಟೆಯಲ್ಲಿ ಇರಬಾರದು ಎಂಬ ಉದ್ದೇಶ ದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರ ಕೊಡುವ ತಲಾ 5 ಕೆ.ಜಿ. ಅಕ್ಕಿಯ ಜತೆಗೆ ರಾಜ್ಯ ಸರಕಾರವೂ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ನೀಡುವುದು ಇದರ ಮೂಲ ಉದ್ದೇಶವಾಗಿತ್ತು.

ಈಗ ಪಡಿತರ ಚೀಟಿಗಳ ಅರ್ಹತೆ ಮತ್ತು ಅನರ್ಹತೆಯ ವಿಚಾರವು ಸರಕಾರದ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಹೀಗಾಗಿ ಪಡಿತರ ಚೀಟಿದಾರರಿಗೆ ಪಾತಾಳ ಗರಡಿ ಹಾಕಿರುವ ಸರಕಾರಿ ಅಧಿಕಾರಿಗಳು, ಕುಟುಂಬದ ಮಾಲಕರನ್ನು ಸೂಚಿಸದ 53,547 ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದ್ದರೆ, ಬಹು ಮಾಲಕತ್ವವುಳ್ಳ 4,845 ಕಾರ್ಡ್‌ಗಳಿವೆ. ಆಧಾರ್‌ ಸಂಖ್ಯೆ ವಿಲೀನಗೊಳ್ಳದ 54,349 ಪಡಿತರ ಚೀಟಿಗಳಿದ್ದರೆ, ಆಧಾರ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ವಿಲೀನಗೊಳ್ಳದ 21.69 ಲಕ್ಷ ಕಾರ್ಡ್‌ಗಳಿವೆ. ನಕಲಿ ಆಧಾರ್‌ ವಿಲೀನ ಮಾಡಿದ 14 ಪಡಿತರ ಚೀಟಿಗಳನ್ನೂ ಪಟ್ಟಿ ಮಾಡಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ 2023 ರ ಮಾರ್ಚ್‌ನಿಂದ ಸತತ ಮೂರು ತಿಂಗಳ ಕಾಲ ಆಹಾರ ಧಾನ್ಯವನ್ನೇ ಪಡೆಯದ 5.32 ಲಕ್ಷ ಪಡಿತರ ಚೀಟಿಗಳಿವೆ. ಇವರು ಪಡಿತರ ಚೀಟಿಯನ್ನು ರೇಷನ್‌ಗಿಂತ ಹೆಚ್ಚು ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ಪಡೆಯಲು ಬಳಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಹೇಳಿದೆ.

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ, ಆಹಾರ ಧಾನ್ಯ ಬೇಕು ಎನ್ನುವವರು ಮತ್ತು ವೈದ್ಯಕೀಯ ಉದ್ದೇಶಕ್ಕೆ ಪಡಿ ತರ ಚೀಟಿ ಪಡೆಯುವವರನ್ನು ಪ್ರತ್ಯೇಕಿಸುವ ಸಲಹೆಯನ್ನು ಸರಕಾರದ ಮುಂದಿಟ್ಟಿದ್ದಾರೆ. ಎಸ್‌.ಎಂ. ಕೃಷ್ಣ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಡಿ.ಬಿ.ಇನಾಂದಾರ್‌, ಇತ್ತೀಚಿನ ಉಮೇಶ್‌ ಕತ್ತಿ ಅವರ ಅವಧಿವರೆಗೆ ಪಡಿತರ ಚೀಟಿ ನೀಡುವ ಮಾನ ದಂಡಗಳ ಪರಿಶೀಲನೆ ಪ್ರಕ್ರಿಯೆಗಳು ವಿವಾದವಾದದ್ದೇ ಹೆಚ್ಚು. ಇದಕ್ಕೆ ಕಾರ್ಡ್‌ ದಾರರಿಂದ ಸರಕಾರ ಸಾಕಷ್ಟು ಪ್ರತಿರೋಧ ಎದುರಿಸಿದ್ದು ಉಂಟು.

Advertisement

ಈಗಾಗಲೇ ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಜತೆಗೆ ರಾಜ್ಯ ಸರಕಾರದಿಂದ ಆರೋಗ್ಯ ಕರ್ನಾಟಕ ಕಾರ್ಡ್‌ನ್ನು ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಆಧರಿಸಿ ನೀಡಲಾಗುತ್ತಿದೆ. ಐದು ಲಕ್ಷ ರೂ.ವರೆಗೆ ವೈದ್ಯಕೀಯ ಸೇವೆ ಪಡೆಯಲು ಅವಕಾಶವಿದೆ. ಇದು ಎಲ್ಲ 1.28 ಕೋಟಿ ಪಡಿತರ ಚೀಟಿಗಳನ್ನುಳ್ಳ ಬಿಪಿಎಲ್‌ ಕುಟುಂಬಗಳಿಗೆ ಅನ್ವಯಿಸುತ್ತಿದೆ. ಅವರು ಆಹಾರ ಧಾನ್ಯ ಪಡೆಯಲಿ, ಪಡೆಯದಿರಲಿ. ಈಗ ಅವರಿಗೊಂದು ಕಾರ್ಡ್‌, ಇವರಿಗೊಂದು ಕಾರ್ಡ್‌ ಕೊಡಲು ಸಾಧ್ಯವೇ? ಇದರಿಂದ ಸರಕಾರಕ್ಕೆ ಇನ್ನಷ್ಟು ಹೊರೆ ಆಗುವುದಿಲ್ಲವೇ? ಆಹಾರ ಧಾನ್ಯ ಪಡೆಯು ತ್ತಿರುವವರು ವೈದ್ಯಕೀಯ ಉದ್ದೇಶಕ್ಕೆ ಕಾರ್ಡ್‌ ಅನ್ನು ಬಳಸುವ ಹಾಗಿರು ವುದಿಲ್ಲವೇ? ಅನ್ನಭಾಗ್ಯವು ಕನ್ನಭಾಗ್ಯ ಆಗಬಾರದು ಎಂಬುದು ಎಷ್ಟು ಸರಿಯೋ, ಆಹಾರವೂ ಸಿಗಬೇಕು, ಆರೋಗ್ಯವೂ ಸಿಗಬೇಕು ಎಂಬುದು ಕೂಡ ಅಷ್ಟೇ ಸರಿ. ಹೀಗಾಗಿ ಅಧಿಕಾರಿಗಳು ದಾರಿ ತಪ್ಪಿಸಿದರೂ ಸರಕಾರ ಸರಿ ದಾರಿಯಲ್ಲಿ ನಡೆಯುವುದೊಂದೇ ಇದಕ್ಕಿರುವ ಪರಿಹಾರ.

Advertisement

Udayavani is now on Telegram. Click here to join our channel and stay updated with the latest news.

Next