Advertisement

1,300 ವರ್ಷಗಳ ಹಿಂದಿನ ನೆಕ್ಲೇಸ್‌ನ ಒಡತಿ ಯಾರು?

07:23 PM Dec 13, 2022 | Team Udayavani |

ಲಂಡನ್‌: ಇಂಗ್ಲೆಂಡ್‌ನ‌ ಪ್ರಾಚೀನ ಸಮಾಧಿಸ್ಥಳವೊಂದರಲ್ಲಿ ಬರೋಬ್ಬರಿ 1,300 ವರ್ಷಗಳಷ್ಟು ಹಳೆಯ ಚಿನ್ನ ಮತ್ತು ಅಮೂಲ್ಯ ಹರಳುಗಳನ್ನು ಒಳಗೊಂಡ ನೆಕ್ಲೇಸ್‌ ಇತ್ತೀಚೆಗೆ ಪತ್ತೆಯಾಗಿದೆ. ಇದು ಆ ಕಾಲದ ಕ್ರಿಶ್ಚಿಯನ್‌ ಧರ್ಮದ ನಾಯಕಿಗೆ ಸೇರಿದ್ದಾಗಿರಬಹುದು ಎಂದು ಈ ಆವಿಷ್ಕಾರದಲ್ಲಿ ಭಾಗಿಯಾಗಿರುವ ತಜ್ಞರು ಅಂದಾಜಿಸಿದ್ದಾರೆ.

Advertisement

ಕಳೆದ ಏಪ್ರಿಲ್‌ನಲ್ಲಿ ಗೃಹ ನಿರ್ಮಾಣ ಯೋಜನೆಗೆಂದು ಭೂಮಿಯ ಉತVನನ ಆರಂಭಿಸಿದಾಗ ನಾರ್ತ್‌ಆ್ಯಂಪ್ಟನ್‌ಶೈರ್‌ನಲ್ಲಿ ಈ ಪ್ರಾಚೀನ ನೆಕ್ಲೇಸ್‌ ಪತ್ತೆಯಾಗಿತ್ತು. ಅದರಲ್ಲಿ 30 ಪೆಂಡೆಂಟ್‌ಗಳು ಹಾಗೂ ಮಣಿಗಳಿದ್ದು, ರೋಮನ್‌ ನಾಣ್ಯಗಳು, ಚಿನ್ನ, ರಕ್ತಮಣಿಗಳು, ಗಾಜು ಮತ್ತು ಅರೆಅಮೂಲ್ಯ ಹರಳುಗಳಿಂದ ಅದನ್ನು ತಯಾರಿಸಲಾಗಿದೆ. ಅದು ಪತ್ತೆಯಾಗಿರುವ ಸ್ಥಳದ ಮಣ್ಣಿನ ಪರೀಕ್ಷೆ ನಡೆಸಿದಾಗ, ಇದು 630ರಿಂದ 670ನೇ ಇಸವಿಯ ನೆಕ್ಲೇಸ್‌ ಆಗಿರಬಹುದು ಎಂದು ಕಂಡುಕೊಳ್ಳಲಾಗಿದೆ.

ಅಲ್ಲದೇ, ಆ ಸಮಯದಲ್ಲಿ ಆಂಗ್ಲೋ- ಸ್ಯಾಕ್ಸನ್‌ ಇಂಗ್ಲೆಂಡ್‌ನ‌ಲ್ಲಿ ಕ್ರಿಶ್ಚಿಯನ್‌ ಧರ್ಮವು ನಿಧಾನವಾಗಿ ನೆಲೆ ಕಂಡುಕೊಳ್ಳುತ್ತಿತ್ತು.

ಹೀಗಾಗಿ, ಈ ನೆಕ್ಲೇಸ್‌ ಕ್ರಿಶ್ಚಿಯನ್‌ ಧರ್ಮದ ಪ್ರಭಾವಿ ಮಹಿಳೆಯದ್ದಾಗಿರಬಹುದು, ಒಂದೋ ಆಕೆ ಎಲ್ಲಿಗೋ ಓಡಿ ಹೋಗುತ್ತಿರುವಾಗ ಅಥವಾ ಪ್ರಯಾಣದಲ್ಲಿದ್ದಾಗ ಮೃತಪಟ್ಟಿರಬಹುದು ಎಂದೂ ತಜ್ಞರು ಊಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next