ಬೆಂಗಳೂರಿನಲ್ಲಿ ಭದ್ರತಾ ಸಿಬಂದಿಯಾಗಿರುವ ಕೊಡಗು ಮೂಲದ ತಮ್ಮಯ್ಯ ಅವರ ಪುತ್ರ, ಬಿಇ ಪ್ರಥಮ ವರ್ಷದ ವಿಶು ಉತ್ತಪ್ಪ (19) ಸಾವನ್ನಪ್ಪಿದವರು.
Advertisement
ತಮ್ಮಯ್ಯ ಅಂಗಡಿಗೆಂದು ಹೋಗಿದ್ದಾಗ ಮನೆಯಲ್ಲಿದ್ದ ತಂದೆಯ ಗನ್‌ನಿಂದ ವಿಶು ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಬಳಿಕ ತಂದೆಗೆ ಕರೆ ಮಾಡಿ ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಗಾಬರಿಗೊಂಡ ತಮ್ಮಯ್ಯ ಮನೆಗೆ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶುವನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ