Advertisement

ಮುಸ್ಸಂಜೆ

03:45 AM Jul 02, 2017 | Harsha Rao |

ಸುಮಾರು ಐದೂಮುಕ್ಕಾಲಾಗಿರಬೇಕು, ಮುಸ್ಸಂಜೆಯ ಸಮಯ. ಶಾಲಾವಿದ್ಯಾರ್ಥಿಗಳ ಸ್ಕಾಲರ್‌ಶಿಪ್ಪಿನ ಒಂದು ದೊಡ್ಡ ಪಟ್ಟಿ ಹಿಡಿದು ಅವರ ಖಾತೆಗಳಿಗೆ ಹಣ ಜಮಾ ಮಾಡುತ್ತಿ¨ªೆ. ಅಷ್ಟರಲ್ಲಿಯೇ ನಮ್ಮ ಅಟೆಂಡರ್‌ ಬಂದು, “ಸರ್‌, ಯಾರೋ ಬಂದಿ¨ªಾರೆ. ತುಂಬಾ ವಯಸ್ಸಾಗಿದೆ ಇಂಗ್ಲಿಷ್‌ನಲ್ಲಿ ಮಾತಾಡ್ತಿ¨ªಾರೆ’ ಎಂದ. ನಾನು ಯಾರಪ್ಪಾ ಅದು ಬಳ್ಳಾರಿಯ ಸಂಡೂರಿನಲ್ಲಿ ಇಂಗ್ಲಿಷ್‌ನಲ್ಲಿ ಮಾತಾಡೋರು ಎಂದುಕೊಂಡೆ. ವಯಸ್ಸಾಗಿದೆ ಎಂದು ಬೇರೆ ಹೇಳಿದನಲ್ಲ , ಆದ್ದರಿಂದ ಬ್ಯಾಂಕ್‌ನ ಸಮಯ ಮುಗಿದಿದ್ದರೂ ಒಳಗೆ ಬಿಡಲು ಅನುಮತಿ ನೀಡಿದೆ. 

Advertisement

ಆಗ ಒಳಗೆ ಬಂದದ್ದು ದಪ್ಪ ಕನ್ನಡಕ, ಕೊಂಚ ಹಳೆಯದೇ ಎನ್ನಬಹುದಾದ ಅಗಲವಾದ ಪೈಜಾಮ ನೀಲಿ ಅಂಗಿ, ಹವಾಯ್‌ ಚಪ್ಪಲಿ ತೊಟ್ಟ ಕೃಶಕಾಯದ ನೋಡಲು ಹೆಚ್ಚಾಕಡಿಮೆ ಆರ್‌.ಕೆ. ಲಕ್ಷ್ಮಣ್‌ ಅವರ “ಕಾಮನ್‌ ಮ್ಯಾನ್‌’ನಂತೆ ಕಾಣುವ ಒಬ್ಬ ವ್ಯಕ್ತಿ. ವಯಸ್ಸಾಗಿದ್ದರೂ ತುಂಬಾ ಚುರುಕಾದ ಆಸಾಮಿ. ಕೈಯಲ್ಲಿ ಮೂರು ಡೆಪಾಸಿಟ್‌ ಬಾಂಡ್‌ಗಳನ್ನು ಹಿಡಿದು “ಕೈಂಡ್‌ಲಿ ರಿನೀವ್‌ ದೀಸ್‌ ಸರ್‌’ ಎಂದರು. ನಾನು, “ಬ್ಯಾಂಕ್‌ನ ಸಮಯ ಮುಗಿದಿದೆ, ನೀವು ದಯವಿಟ್ಟು ನಾಳೆ ಬನ್ನಿ’ ಎಂದೆ. ಆಗವರು, “I am a lonely man, senior citizen. I can not come daily. Kindly consider this as a request, Sir’. (ನಾನೊಬ್ಬ ಒಬ್ಬಂಟಿಗ, ಹಿರಿಯ ನಾಗರಿಕ. ದಿನವೂ ನನಗೆ ಬರಲು ಆಗುವುದಿಲ್ಲ. ಇದು ನನ್ನ ಪ್ರಾರ್ಥನೆ) ಎಂದು ಪರಿ ಪರಿಯಾಗಿ ಬೇಡಿಕೊಂಡರು. ನನಗೂ ಹೌದೆನಿಸಿ, “ಆಯಿತು, ಕೊಡಿ’ ಎಂದು ಅವುಗಳನ್ನು ನಿಗದಿತ ಜಾಗಗಳಲ್ಲಿ ಸಹಿ ತೆಗೆದುಕೊಂಡು ಸ್ವೀಕರಿಸಿದೆ. ಆದರೂ ಇಷ್ಟು ವಯಸ್ಸಾದವರು ಒಬ್ಬಂಟಿಯಾಗಿ ಇರಲಿಕ್ಕಿಲ್ಲ , ಮಕ್ಕಳು ಯಾರಾದರೂ ಜೊತೆಯಲ್ಲಿರಬಹುದು ಎಂದೆಣಿಸಿ, “ನಿಮಗೆ ಎಷ್ಟು ಜನ ಮಕ್ಕಳು?’ ಎಂದು ಕೇಳಿದೆ. ಆಗವರು, I have two sons. One stays at US another at Trivandrum, Kerala. Both are engineers (ನನಗೆ ಇಬ್ಬರು ಗಂಡುಮಕ್ಕಳು. ಒಬ್ಬ ಅಮೆರಿಕದಲ್ಲಿರುತ್ತಾನೆ ಇನ್ನೊಬ್ಬ ಕೇರಳದ ತಿರುವನಂತಪುರದಲ್ಲಿರುತ್ತಾನೆ. ಇಬ್ಬರೂ ಇಂಜಿನಿಯರ್‌ಗಳು) ಎಂದರು. ಇದನ್ನು ಹೇಳುವಾಗ ಅವರ ಕಣ್ಣಲ್ಲಿ ಒಂದು ಬೆಳಕು ಕಾಣಿಸುತ್ತಿತ್ತು. ಮಕ್ಕಳ ಮೇಲೆ ಅಪಾರ ಅಭಿಮಾನ ಅವರಿಗೆ.

ಇಂಗ್ಲಿಷ್‌ನಲ್ಲಿ ಮಾತನಾಡುವ ಅವರ ಹಿನ್ನೆಲೆ ಬಗ್ಗೆ ಕೊಂಚ ಕುತೂಹಲವೆನಿಸಿತು. ಅವರನ್ನು ಕೇಳಿಯೇಬಿಟ್ಟೆ. ಆಗವರು, “”ನನ್ನ ಹೆಸರು ಕೃಷ್ಣನ್‌ ನಾಯರ್‌. ಮೂಲತಃ ಕೇರಳದವನು. ಇÇÉೇ ದೋಣಿಮಲೈನ ಭಾರತ ಸರ್ಕಾರದ ಗಣಿ ಉದ್ಯಮವಾಗಿರುವ ಎನ್‌ಎಂಡಿಸಿಯಲ್ಲಿ  ಉದ್ಯೋಗಿಯಾಗಿ¨ªೆ. ಹತ್ತು ವರ್ಷದ ಹಿಂದೆ ನಿವೃತ್ತನಾದ ನಂತರ ಇಲ್ಲಿಯೇ ನೆಲೆಸಿದ್ದೇನೆ. ನಮ್ಮ ಊರಿನ ಕಡೆ ನಮ್ಮವರು ಎಂದು ಯಾರೂ ಇಲ್ಲ” ಎಂದರು. “”ನಿಮ್ಮ ಮಕ್ಕಳ ಬಳಿಯಾದರೂ ಹೋಗಬಹುದಿತ್ತಲ್ಲ?” ಎಂಬ ನನ್ನ ಪ್ರಶ್ನೆಗೆ, “”ಹಿರಿಯ ಮಗ, ಅಮೆರಿಕದಲ್ಲಿರುವವನು ವೀಸಾ ದೊರೆಯುವುದು ಕಷ್ಟ ಎನ್ನುತ್ತಾನೆ. ಮೇಲಾಗಿ ನನಗೇ ನನ್ನ ಕೊನೆಗಾಲದಲ್ಲಿ ಪರಕೀಯ ದೇಶದಲ್ಲಿ ಜೀವಿಸಲು ಇಷ್ಟವಿಲ್ಲ” ಎಂದರು. ಮಗ ದೂರವಿಟ್ಟರೂ ಅವನನ್ನು ಬಿಟ್ಟುಕೊಡುವುದು ಅವರಿಗೆ ಇಷ್ಟವಿದ್ದಂತೆ ಕಾಣಲಿಲ್ಲ, ಆರೋಪವನ್ನು ತಮ್ಮ ಮೇಲೆಯೇ ಹೊರಿಸಿಕೊಂಡರು. “”ಕಿರಿಯ ಮಗನ ಮನೆಯಲ್ಲಿ ಕೊಂಚ ದಿನ ಇ¨ªೆ, ನನ್ನ ಸೊಸೆ ತುಂಬಾ ದೊಡ್ಡ ಮನೆತನದವಳು.

ನಾನಲ್ಲಿ ಇರುವುದು ಅವಳಿಗೆ ಇಷ್ಟವಿರಲಿಲ್ಲ. ನನ್ನ ಮಗ ಎಷ್ಟು ಬೇಡ ಎಂದರೂ ಅಲ್ಲಿಂದ ಹೊರಟು ಬಂದೆ” ಎಂದಾಗ ಅವರ ಕಣ್ಣಂಚಿನಲ್ಲಿ ಹನಿಯೊಂದು ಜಾರಲು ಸಿದ್ಧವಾಗಿ ನಿಂತಿತ್ತು. “”ನಿಮ್ಮ ಮಡದಿ?” ಎಂದಾಗ, “”ಅವಳು ತೀರಿಹೋಗಿ ಸುಮಾರು ಆರೇಳು ವರ್ಷಗಳೇ ಆದವು. ಆಗಿನಿಂದ ಅಡಿಗೆ, ತಿಂಡಿ, ಮನೆಕೆಲಸ ಎಲ್ಲವನ್ನೂ ಮಾಡಿಕೊಂಡು ಒಬ್ಬಂಟಿಯಾಗಿದ್ದೇನೆ. ಸಮಯ ಕಳೆಯಲು ಕೋರ್ಟ್‌ನ ಮುಂದೆ ಮರದ ಕೆಳಗೆ ಇಂಗ್ಲಿಷ್‌ ಟೈಪಿಂಗ್‌ ಮಾಡುತ್ತಾ ಕಾಲ ನೂಕುತ್ತಿದ್ದೇನೆ” ಎಂದಾಗ ಅವರ ಮನಸ್ಸಿನ ಭಾರ ಸ್ವಲ್ಪ ಕಡಿಮೆಯಾದಂತೆ ಅನಿಸಿತು.

ಅವರ ಡೆಪಾಸಿಟ್‌ ಬಾಂಡ್‌ಗಳು ರಿನೀವಲ್‌ ಆಗಿ ಸಿದ್ದವಾಗಿದ್ದವು. ಸಹಿ ಹಾಕುವಾಗ ನಾಮಿನಿ ಜಾಗದಲ್ಲಿ ಅವರ ಮಗನ ಹೆಸರು ಕಾಣಿಸಿತು. “ಮಗ ಕೊನೆಯ ಸಾರಿ ನಿಮ್ಮನ್ನು ನೋಡಲು ಯಾವಾಗ ಬಂದಿದ್ದ?’ ಎಂದು ಕೇಳಿದೆ. “ತುಂಬಾ ದಿನಗಳಾದವು. ನನಗೆ ನೆನಪಿಲ್ಲ, ಹೋಗಲಿ ಬಿಡಿ’ ಎಂದು ಅಲ್ಲಿಂದ ಹೊರಟು ನಿಂತರು.

Advertisement

ನಂತರ ನನ್ನ ಮನದಲ್ಲಿ ಕಾಡುತ್ತಿದ್ದ ಪ್ರಶ್ನೆ, ಬದುಕಿನ ಮುಸ್ಸಂಜೆಯಲ್ಲಿ ನಮ್ಮ ಪ್ರಯಾಣ ಯಾವಾಗಲೂ ಒಂಟಿಯೇ? ಮಕ್ಕಳ ಮೇಲೆ ಅಪಾರ ಪ್ರೀತಿ ಇರುವ ತಂದೆಗೇ ಈ ಗತಿಯಾದರೆ ಇನ್ನುಳಿದವರ ಪಾಡೇನು? ಸಂಬಂಧಗಳಿಗೆ ಏನು ಬೆಲೆ? ಕಾಲವೇ ಉತ್ತರಿಸಬೇಕು.

– ಸಚಿತ್‌ ರಾಜು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next