Advertisement

ಮೀಸಲಿಗಾಗಿ 20ರಂದು ರಾಜ್ಯಾದ್ಯಂತ ಹೋರಾಟ

11:52 AM May 11, 2022 | Team Udayavani |

ಕಲಬುರಗಿ: ಬೆಂಗಳೂರಿನಲ್ಲಿ ಕಳೆದ 90 ದಿನಗಳಿಂದ ಎಸ್ಸಿ,ಎಸ್ಟಿ ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಶ್ರೀ ಪ್ರಸನ್ನಾನಂದಪುರಿ ಮಹಾ ಸ್ವಾಮೀಜಿಗಳ ಧರಣಿ ಕುರಿತು ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಖಂಡಿಸಿ ಮೇ 20ರಂದು ರಾಜ್ಯವ್ಯಾಪಿ ಹೋರಾಟ ನಡೆಸಲು ಮಂಗಳವಾರ ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಬಂಜಾರಾ, ಮಾದಿಗ, ಚಲವಾದಿ, ಭೋವಿ ಸಮಾಜಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿ ಸರ್ಕಾರದ ನಡೆ ಕುರಿತು ಖಂಡಿಸಿದರು. 90 ದಿನಗಳಿಂದ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಮತ್ತು ಮಂತ್ರಿಗಳು ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಕುರಿತು ಆಸಕ್ತಿ ಇಲ್ಲ ಎಂದು ದೂರಿದರು.

ಈ ಎಲ್ಲ ನಿರ್ಲಕ್ಷ್ಯವನ್ನು ಖಂಡಿಸಿ ಮೇ 20ರಂದು ರಾಜ್ಯವ್ಯಾಪಿ ಹೋರಾಟವನ್ನು ಮಾಡಲು ನಿರ್ಧರಿ ಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿ ಪಾಟೀಲ ತಿಳಿಸಿದರು.

ಬಂಜಾರಾ ನೌಕರರ ಸಂಘದ ಬಿ.ಬಿ.ನಾಯಕ, ಭೋವಿ ಸಮಾಜದ ಮಲ್ಲಿಕಾರ್ಜುನ ಕುಸ್ತಿ, ವಾಲ್ಮೀಕಿ ಸಮಾಜದ ಮಾರುತಿ ಜಮಾದಾರ, ವೆಂಕಟರಮಣ ಕೊಡಚಿ, ನಂದ ಕುಮಾರ ನಾಯಕ, ರಾಜು, ಅಶೋಕ ಕಾಳಮಂದಿರಗಿ, ಮೇದಾರ ಸಂಘದ ಜಿಲ್ಲಾಧ್ಯಕ್ಷರಾದ ಭೀಮಣ್ಣ ಬೋನಾಳ, ವಿಠಲ ಜಾಧವ, ಎಸ್‌.ಎಸ್‌. ಪವಾರ, ಮಂಜುನಾಥ ನಾಲವಾರಕರ, ಲಾಲಪ್ಪ ರಾಠೊಡ, ಬಸವರಾಜ ಜಮಾದಾರ ಚಿಂಚೋಳಿ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next